ಸಿರಿಯಾ: ಸೇನೆಯಿಂದ ಬೀಕರ ಬಾಂಬ್ ದಾಳಿ; 8 ಮಕ್ಕಳು ಸೇರಿದಂತೆ 40 ಮಂದಿ ಮೃತ್ಯು!
ನ್ಯೂಸ್ ಕನ್ನಡ ವರದಿ(08-04-2018):ಸಿರಿಯಾ: ಅಧ್ಯಕ್ಷ ಬಶಾರುಲ್ ಅಸದ್ ಪರವಾಗಿರುವ ಸೇನೆಯು ರಾಜಧಾನಿ ದಮಾಸ್ಕಸ್ ಹೊರವಲಯದ ಡೌಮ ಪಟ್ಟಣದ ಮೇಲೆ ಶನಿವಾರ ಭೀಕರ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ 8 ಮಕ್ಕಳು ಸೇರಿದಂತೆ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ.
ಡೌಮ ಪಟ್ಟಣದ ಮೇಲೆ ಸರಕಾರಿ ನಿಯಂತ್ರಣದ ಸೇನೆಯು ನಿರಂತರ ಬಾಂಬ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಆಕಾಶದಲ್ಲಿ ಮೂರು ಯುದ್ಧ ವಿಮಾನಗಳು ಹಾಗೂ ಎರಡು ಹೆಲಿಕಾಪ್ಟರ್ ಗಳು ಸುತ್ತುತ್ತಿವೆ. ಜನರು ಭಯಬೀತರಾಗಿ ಓಡುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಡೌಮ ಪಟ್ಟಣವನ್ವು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಬಂಡುಕೋರ ಜೈಶ್ ಅಲ್ ಇಸ್ಲಾಮ್ ಗುಂಪನ್ನು ಹಿಂದೆ ಸರಿಯುವಂತೆ ಬೆಧರಿಸುವ ತಂತ್ರವಾಗಿ ರಶ್ಯಾ ಯುದ್ಧ ವಿಮಾನಗಳ ನೆರವಿನಿಂದ ಸಿರಿಯಾ ಸೇನೆಯು ತೀವ್ರ ವಾಯುದಾಳಿಯನ್ನು ಮುಂದುವರಿಸಿದೆ.