ಏರ್ ಸರ್ಜಿಕಲ್ ಸ್ಟ್ರೈಕ್ ಕುರಿತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ದು ಹೇಳಿದ್ದೇನು?
ನ್ಯೂಸ್ ಕನ್ನಡ ವರದಿ: ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿ ಸಂದರ್ಭದಲ್ಲಿ ನೀಡಿದ ಹೇಳಿಕೆಯಿಂದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಪಂಜಾಬ್ನ ಕಾಂಗ್ರೆಸ್ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಕವನದ ಮೂಲಕ ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸಿದ್ದು ಟ್ವೀಟ್ ಮೂಲಕ, ಉಗ್ರರರಿಗೆ ಈ ರೀತಿಯ ದಾಳಿಯ ಮೂಲಕವೇ ನೀಡಬೇಕು. ಶಾಂತಿಯಿಂದ ಮಾತನಾಡಿದ್ರೆ ಅವರು ಮತ್ತಷ್ಟು ಚಿಗುರಿಕೊಳ್ಳುತ್ತಾರೆ. ಹಾಗಾಗಿ ಏಟಿಗೆ ಏದಿರೇಟು ಇಂದು ಅನಿವಾರ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಬ್ಬಿಣ ಕಬ್ಬಿಣವನ್ನೇ ಕತ್ತರಿಸುತ್ತದೆ. ಬೆಂಕಿ ಬೆಂಕಿಯನ್ನೇ ನಾಶ ಮಾಡುತ್ತೆ. ಒಂದು ವೇಳೆ ಹಾವು ಕಚ್ಚಿದ್ರೆ, ಔಷಧಿಯನ್ನು ಅದರ ವಿಷದಿಂದಲೇ ತಯಾರು ಮಾಡಲಾಗುತ್ತೆ. ಉಗ್ರರನ್ನು ನಾಶ ಮಾಡುವ ಅನಿವಾರ್ಯತೆ ಇದೆ. ಭಾರತೀಯ ವಾಯಸೇನೆಗೆ ಜೈ. ಜೈ ಹಿಂದ್ ಜೈ, ಹಿಂದ್ ಕೀ ಸೇನಾ ಎಂದು ಬರೆದುಕೊಂಡಿದ್ದಾರೆ.