ಉ.ಪ್ರ; ದಲಿತ ಬಿಜೆಪಿ ಮುಖಂಡರ ಅತೃಪ್ತಿ ಹಿನ್ನಲೆ: ಮೋದಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್!
ನ್ಯೂಸ್ ಕನ್ನಡ ವರದಿ(08-04-2018): ಉತ್ತರ ಪ್ರದೇಶದ ದಲಿತ ಬಿಜೆಪಿ ಮುಖಂಡರು ತನ್ನ ವಿರುದ್ಧ ಪದೇ ಪದೇ ಅಸಮಾಧಾನ ವ್ಯಕ್ತಪಡಿಸತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸುಮಾರು ಮೂವತ್ತು ನಿಮಿಷಗಳ ಕಾಲ ನಡೆಯ ಮಾತುಕತೆಯ ವಿವರಗಳನ್ನು ನೀಡಲು ಯೋಗಿ ಆದಿತ್ಯ ನಾಥ್ ನಿರಾಕರಿಸಿದರು. ಇತ್ತೀಚೆಗೆ ಇಟಾವಾದ ಬಿಜೆಪಿ ದಲಿತ ಸಂಸದ ಅಶೋಕ್ ಕುಮಾರ್ ದೊಹ್ರೆ ಹಾಗೂ ನಗೀನಾ ಕ್ಷೇತ್ರದ ದಲಿತ ಸಂಸದ ಯಶ್ವಂತ್ ಸಿಂಗ್ ಅವರುಗಳು ಯೋಗಿ ಆದಿತ್ಯ ನಾಥ್ ಕಾರ್ಯವೈಖರಿಯ ಕುರಿತು ಅಸಮಾದಾನ ವ್ಯಕ್ತಪಡಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು.
ಯೋಗಿ ಆದಿತ್ಯನಾಥ್ ದಲಿತರ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಮಾತ್ರವಲ್ಲ ಕೆಲವು ಪ್ರಕರಣಗಳಲ್ಲಿ ವಿನಾಕಾರಣ ದಲಿತರನ್ನು ಆರೋಪಿಗಳಾಗಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಈರ್ವರು ಪತ್ರದಲ್ಲಿ ದೂರಿದ್ದರು.