ಬ್ಯಾರೀಸ್ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ವತಿಯಿಂದ ಯಶಸ್ವೀ ರಕ್ತದಾನ ಶಿಬಿರ

ಮಂಗಳೂರು,ಫೆ 27 : ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರಿಗೆ ಗೌರವಪೂರ್ಣ ಶ್ರದ್ದಾಂಜಲಿ ಅರ್ಪಿಸಲು ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇನೋಳಿ ಮಂಗಳೂರು ಇದರ NSS ಘಟಕ ಮತ್ತು PRAY ಕ್ಲಬ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ವತಿಯಿಂದ ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಹಾಗೂ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 27 ಫೆಬ್ರವರಿ 2019 ನೇ ಬುಧವಾರದಂದು ಬ್ಯಾರೀಸ್ ನಾಲೇಜ್ ಕ್ಯಾಂಪಸ್ ನಲ್ಲಿ ಬೃಹತ್ ರಕ್ತದಾನ ಶಿಬಿರವು ನಡೆಯಿತು.

ರಕ್ತ ದಾನ ಶಿಬಿರದಲ್ಲಿ ವಿದ್ಯಾರ್ಥಿಗಳು,ಅಧ್ಯಾಪಕರು ಹಾಗೂ ಸಿಬಂದಿ ವರ್ಗದ ಒಟ್ಟು 159 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೇನೆಪೋಯ ಆಸ್ಪತ್ರೆ ದೇರಳಕಟ್ಟೆ ಹಾಗೂ ಕೆ ಎಂ ಸಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ವಿದ್ಯಾರ್ಥಿನಿ ವೃಂದದವರು ಭಕ್ತಿಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಪ್ರೊ.ಡಾ.ಮುಸ್ತಫಾ ಬಸ್ತಿಕೋಡಿಯವರು ಅತಿಥಿಗಳ ಪರಿಚಯದೊಂದಿಗೆ ಸ್ವಾಗತಿಸುತ್ತಾ,ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಡಾ.ಪಿ ಮಹಾಬಲೇಶ್ವರಪ್ಪರವರು,”ರಕ್ತವು ಅಮೂಲ್ಯವಾದ ಉಡುಗೊರೆಯಾಗಿದ್ದು,ಯಾರಾದರೂ ಇನ್ನೊಬ್ಬರಿಗೆ ನೀಡುವ ಜೀವದಾನವೆಂಬ ಉಡುಗೊರೆಯಾಗಿದೆ.ರಕ್ತದಾನ ಮಾಡುವ ನಿಮ್ಮ ನಿರ್ಧಾರವು ಇನ್ನೊಬ್ಬರ ಜೀವವನ್ನು ಉಳಿಸ ಬಹುದು.ಹುತಾತ್ಮರಾದ ವೀರ ಸೈನಿಕರ ಮಕ್ಕಳ ಇಂಜಿನಿಯರ್ ಮತ್ತು ಆರ್ಕಿಟೆಕ್ಚರ್ ವಿದ್ಯಾಭ್ಯಾಸಕ್ಕಾಗಿ ಸಂಪೂರ್ಣ ಆರ್ಥಿಕ ಸಹಾಯವನ್ನು ಬ್ಯಾರೀಸ್ ಅಕಾಡೆಮಿ ಒಫ್ ಲರ್ನಿಂಗ್ ಭರಿಸಲಿದೆ ಎಂದು ಆಡಳಿತ ವರ್ಗದ ಪರವಾಗಿ ಘೋಷಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಹೋಪ್ ಫೌಂಡೇಶನ್ ಇದರ ಸ್ಥಾಪಕರೂ ಹಾಗೂ ನಿರ್ವಹಣಾ ತರಬೇತುದಾರ ಸೈಫ್ ಸುಲ್ತಾನ್ ಸಯ್ಯದ್ ರವರು ಮಾತನಾಡುತ್ತಾ,”ರಕ್ತದಾನವು ಜೀವ ಉಳಿಸಲು ಸಹಾಯ ಮಾಡುವ ಪ್ರಮುಖ ಮಾರ್ಗವಾಗಿದೆ.ಜೀವ ಉಳಿಸುವುದರೊಂದಿಗೆ ರಕ್ತದಾನದ ಪ್ರಾಮುಖ್ಯತೆಗೆ ಇನ್ನೂ ಹಲವಾರು ಕಾರಣಗಳಿವೆ.ಒಂದು ದಾನವು ಮೂರು ಜೀವವನ್ನು ಉಳಿಸಬಹುದು.ವೈದ್ಯಕೀಯ ತಂತ್ರಜ್ಞಾಗಳ ಬೆಳವಣಿಗೆಗಳ ಹೊರತಾಗಿಯೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.ಆದ್ದರಿಂದ ಅಗತ್ಯವಿರುವವರಿಗೆ ರಕ್ತ ದಾನವೊಂದೇ ಮಾರ್ಗವಿರುವುದು.ಎಲ್ಲಾ ಜಾತಿ ಧರ್ಮಗಳು ಜೀವ ಉಳಿಸಲು ಪ್ರಾಮುಖ್ಯತೆಯನ್ನು ನೀಡಿದೆ.ಆದ್ದರಿಂದ ರಕ್ತದಾನ ಶಿಬಿರವನ್ನು ಅಧಿಕಗೊಳಿಸಬೇಕು” ಎಂದು ಹೇಳಿದರು.

ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ಪ್ರಾಂಶುಪಾಲರಾದ ಅಶೋಕ್ ಎಲ್ ಪಿ ಮೆಂಡೋನ್ಸಾರವರು ವಿದ್ಯಾರ್ಥಿಗಳನ್ನು ರಕ್ತದಾನ ಮಾಡಲು ಹುರಿದುಂಬಿಸಿದರು.

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಲಹೆಗಾರ ಮುಸ್ತಫಾ ಅಡ್ಡೂರು ದೆಮ್ಮಲೆಯವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು ಹಾಗೂ ಸಮಾಜ ಸೇವೆಗೆ ಸಹಕಾರ ನೀಡುತ್ತಿರುವ ಬ್ಯಾರೀಸ್ ಇನ್ಸ್ಟಿಟ್ಯೂಟ್ ಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬ್ಯಾರಿಸ್ ತಾಂತ್ರಿಕ ಸಂಸ್ಥೆಯ PRAY ಕ್ಲಬ್ ಇದರ ಸಂಯೋಜಕ,ಪ್ರೊಫೆಸ್ಸರ್ ಅಬ್ದುಲ್ ಜಬ್ಬಾರ್,NSS ಘಟಕದ ಸಂಯೋಜಕ,ಪ್ರೊಫೆಸ್ಸರ್ ನಿತಿನ್ ಸಾಲಿಯಾನ್,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸ್ಥಾಪಕ ನಿಸಾರ್ ಉಳ್ಳಾಲ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಮತ್ತು ಬ್ಯಾರಿಸ್ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು,ಸಿಬಂದಿ ವರ್ಗ ಹಾಗೂ ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

CSE ತೃತೀಯ ವರ್ಷದ ವಿದ್ಯಾರ್ಥಿನಿ ಕುಮಾರಿ ಮದೀಹ ನೌಶೀನ್ ಕಾರ್ಯಕ್ರಮ ನಿರೂಪಿಸಿದರು.CSE ಅಂತಿಮ ವರ್ಷದ ವಿದ್ಯಾರ್ಥಿ ಖಾಲಿದ್ ವಂದಿಸಿದರು.

ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಬ್ಯಾರಿಸ್ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಪ್ರಾಧ್ಯಾಪಕ ವೃಂದ ಮತ್ತು ಆಡಳಿತ ವರ್ಗಕ್ಕೆ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಪ್ರಕಟಣೆ
ಮೀಡಿಯಾ ಬಳಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ).

Leave a Reply

Your email address will not be published. Required fields are marked *