ಸರಕಾರವು ವೈದ್ಯಕೀಯ ಶುಲ್ಕ ಹಚ್ಚಿಸುವ ನಿರ್ಧಾರ ಕೈ ಬಿಡದಿದ್ದರೆ ತೀವ್ರ ಹೋರಾಟ: ಕಿದಿಯೂರ್ ನಿಹಾಲ್

ನ್ಯೂಸ್ ಕನ್ನಡ ವರದಿ ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶ ಶುಲ್ಕವನ್ನು ಶೇ ೧೫% ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿರುವುದು ಖೇದಕರ ಎಂದು ಎಸ್ ಐ ಓ ರಾಜ್ಯ ಅಧ್ಯಕ್ಷ ಕಿದಿಯೂರ್ ನಿಹಾಲ್ ತಿಳಿಸಿದ್ದಾರೆ .

ಸರಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥಾರ ಒತ್ತಡಕ್ಕೆ ಮಣಿದು ಪಿ ಜಿ ವೈದ್ಯಕೀಯ (ಸರಕಾರಿ ಸೀಟುಗಳ ) ಕೋರ್ಸುಗಳ ಶುಲ್ಕ 506000 ರೂ. ನಿಂದ 5819000 ಅಂದರೆ ಸುಮಾರು ೭೫೯೦೦ ರೂ. ರಷ್ಟು,ಕಾಮೆಡ್-ಕೆ ಸೀಟುಗಳ ಶುಲ್ಕ 759000 ರೂ ಗಳಿಂದ 872850 ರೂ ಗಳಿಗೆ ಅಂದರೆ ಸುಮಾರು 113850 ರೂ ರಷ್ಟು,ಸ್ನಾತಕೋತ್ತರ ದಂತ ವೈದ್ಯಕೀಯ (ಸರಕಾರಿ ಸೀಟುಗಳ ) ಕೋರ್ಸುಗಳ ಶುಲ್ಕ 258750 ರೂ. ಗಳಿಂದ 297562 ರೂ. ಗಳಿಗೆ ಅಂದರೆ ಸುಮಾರು 38812 ರೂ. ಗಳಷ್ಟು ಹೆಚ್ಚಳಮಾಡಲು ನಿರ್ಧರಿಸುದರಿಂದ ಡಾಕ್ಟರ್ ಆಗ ಬೇಕೆಂದು ಕನಸು ಕಾಣುತ್ತಿರುವ ಸಾವಿರಾರು ಬಡ ವಿದ್ಯಾರ್ಥಿಗಳ ಭವಿಷ್ಯ ಭಗ್ನವಾಗಿದೆ .

ಈ ರೀತಿ ಸರಕಾರವು ಪ್ರತೀ ವರ್ಷ ”ಅತ್ಯುತ್ತಮ ಗುಣಮಟ್ಟ ”ದ ವೈದ್ಯಕೀಯ ಶಿಕ್ಷಣ, ಉತ್ತಮ ಮೂಲ ಸೌಕರ್ಯಗಳಗನ್ನು ಕಲ್ಪಿಸುವ ನೆಪದಲ್ಲಿ ಶುಲ್ಕ ಹೆಚ್ಚಳಮಾಡುವಾಗ ರಾಜ್ಯದಲ್ಲಿರುವ 16 ವೈದ್ಯಕೀಯ ಕಾಲೇಜುಗಳ ಪೈಕಿ ಕೇವಲ ಒಂದೇ ಒಂದು ಕಾಲೇಜು ರಾಷ್ಟ್ರೀಯ ಸಾಂಸ್ಥಿಕ ರ್ಯಾಂಕಿಂಗ್ ಚೌಕಟ್ಟು (ಎನ್ ಐ ಆರ್ ಎಫ್ )ಗೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆದಿದೆ ಎನ್ನುದು ವಿಪರ್ಯಾಸ ಅದರಿಂದಾಗಿ ಸರಕಾರವು ಪದೇ ಪದೇ ಈ ರೀತಿಯ ಕುಂಟು ನೆಪ ಮಾಡಿ ಶುಲ್ಕ ವಿದ್ಯಾರ್ಥಿ ಸಮುದಾಯದ ವಿರುದ್ಧ ಮಾಡುತಿರುವ ಅನ್ಯಾಯವಾಗಿದೆ. ಒಂದು ವೇಳೆ ಸರಕಾರವು ಈ ನಿರ್ಧಾರವನ್ನು ಕೈ ಬಿಡದಿದ್ದರೆ ಎಸ್ ಐ ಓ ವಿದ್ಯಾರ್ಥಿಗಳ ಪರ ಹೋರಾಟ ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *