ರಾಹುಲ್ ಗಾಂಧಿ ಕೇಳಿದ್ದಕ್ಕೆಲ್ಲ ಉತ್ತರಿಸಲು ನಾನೇನು ಅವರ ಗುಲಾಮನಲ್ಲ: ಕುಮಾರ ಸ್ವಾಮಿ!

ನ್ಯೂಸ್ ಕನ್ನಡ ವರದಿ(08-04-2018): ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಿರಲು ನಾನೇನು ಅವರ ಗುಲಾಮನಲ್ಲ. ನಾನು ರಾಜ್ಯದ ಜನರ ಗುಲಾಮ. ಅವರು ಪ್ರಶ್ನಿಸಲಿ. ಜೆಡಿಎಸ್‌ ನಿಲುವೇನು? ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು? ಎಂಬುದರ ಬಗ್ಗೆ ಉತ್ತರಿಸುತ್ತೇನೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ.

ರಾಜ್ಯದ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ನಿಲುವನ್ನು ಹೊಂದಿಲ್ಲ ಅವರ ನಿಲುವು ಸ್ಪಷ್ಟ ಪಡಿಸಬೇಕೆಂದು ರಾಹುಲ್ ಗಾಂಧಿ ಟೀಕಿಸಿದ್ದರು. ನನ್ನ ಪಕ್ಷವನ್ನು ಟೀಕಿಸಲು ಅವರಿಗೇನು ಅಧಿಕಾರವಿದೆ. ಟೀಕಿಸಲು ಅವರು ಯಾರು ಎಂದು ಎಚ್ ಡಿಕೆ ಖಾರವಾಗಿ ಪ್ರತಿಕ್ರಯಿಸಿದ್ದಾರೆ.

ಕರ್ನಾಟಕದ ಜನರೇ ನಮ್ಮ ಹೈಕಮಾಂಡ್‌. ಉತ್ತರ ಕರ್ನಾಟಕದಲ್ಲಿ 45 ಹಾಗೂ ಹಳೇ ಕರ್ನಾಟಕದಲ್ಲಿ 70 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಮೂಡಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹೇಳಿದರು.

 

Leave a Reply

Your email address will not be published. Required fields are marked *