ಅಂಬರೀಷ್ ಸತ್ತು ತಿಂಗಳು ಕಳೆದಿಲ್ಲ, ಸುಮಲತಾ ರಾಜಕೀಯಕ್ಕೆ ಬಂದಿದ್ದಾರೆ!: ರೇವಣ್ಣ

ನ್ಯೂಸ್ ಕನ್ನಡ ವರದಿ: ಲೋಕಸಭಾ ಚುನಾವಣೆ ಹತ್ತಿರ ಬಂದಂತೆ ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳು ಕಂಡು ಬರುತ್ತಿದ್ದು, ಮಂಡ್ಯ ಜಿಲ್ಲೆಯ ಟಿಕೆಟ್ ಲಾಬಿ ಇದೀಗ ವೈಯಕ್ತಿಕ ವಾಗ್ದಾಳಿ ಶುರುವಾಗುವ ಮಟ್ಟಕ್ಕೆ ಬೆಳೆದಿದೆ.

ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ನಂತರ ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಗೆ ನಿಂತು ರಾಜಕೀಯ ಪ್ರವೇಶಿಸಲು ಕಾತುರರಾಗಿರುವ ಸುಮಲತಾ ಅಂಬರೀಷ್ ಅವರಿಗೆ ಕಾಂಗ್ರೆಸ್ ಕೈಕೊಟ್ಟಿದ್ದು, ಮೈತ್ರಿ ಸರ್ಕಾರದ ಪಾಲುದಾರರಾದ ಜೆಡಿಎಸ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಎಂದು ಕೈತೊಳುದುಕೊಂಡಿತ್ತು. ಆದರೂ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಕೊನೆಯ ವರೆಗೂ ಕಾಯುವೆ, ಕಣದಿಂದ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ, ಪಕ್ಷೇತರವಾದರೂ ಸೈ ಎಂದು ಸುಮಲತಾ ಖಡಕ್ ನಿಲುವು ಪ್ರಕಟಿಸಿದ್ದು, ಕುತೂಹಲ ಮೂಡಿಸಿತ್ತು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ ಪಡಿಸಿದ ಜೆಡಿಎಸ್ ಈಗಾಗಲೇ ಪ್ರಚಾರ ಕಾರ್ಯಕ್ರಮವೂ ಆರಂಭಿಸಿತ್ತು. ಆದರೆ ಇದೀಗ ಸಚಿವ ರೇವಣ್ಣ ‘ಗಂಡ ಸತ್ತು ಇನ್ನೂ ತಿಂಗಳು ಕಳೆದಿಲ್ಲ. ಆಗಲೇ ಸುಮಲತಾ ರಾಜಕೀಯಕ್ಕೆ ಬಂದಿದ್ದಾರೆ, ಸುಮಲತಾ ಮಾಡಿದ ಚಾಲೆಂಜ್​ನಿಂದಲೇ ನಿಖಿಲ್ ಸ್ಪರ್ಧೆಗೆ ಇಳಿದಿದ್ದು. ಇಲ್ಲದಿದ್ರೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುವುದು ನಮ್ಮ ಆಶಯವಾಗಿತ್ತು’ ಎಂದ ಸಾರ್ವಜನಿಕವಾಗಿ ಸುಮಲತಾ ವಿರುದ್ಧ ಹೇಳಿಕೆ ನೀಡಿ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಸುಮಲತಾ ಡ್ರಾಮ ಮಾಡುತ್ತಿದ್ದಾರೆ. ಇಷ್ಟರವರಗೆ ಸಿನಿಮಾದಲ್ಲಿ ನಟಿಸುತಿದ್ದರು ಇದೀಗ ರಾಜಕೀಯದಲ್ಲಿ ನಟಿಸಲು ಬಂದಿದ್ದಾರೆ. ಆದರೆ ಮಂಡ್ಯದ ಜನರಿಗೆ ನಟಿಸುವವರ ಕಣ್ಣೀರಿನ ಬಗ್ಗೆ ತಿಳಿದಿದೆ, ನಿಖಿಲ್ ಕುಮಾರಸ್ವಾಮಿಯೇ ಮಂಡ್ಯದ ಜನರ ಆಯ್ಕೆ ಎಂದು ಸುಮಲತಾರಿಗೆ ಟಾಂಗ್ ನೀಡಿದ್ದಾರೆ.

Leave a Reply

Your email address will not be published. Required fields are marked *