ಸುಮಲತಾರಿಗೆ ಕೈಕೊಟ್ಟ ಸುದೀಪ್! ಬೆಂಬಲಿಸುವ ಕುರಿತು ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಲೋಕಸಭಾ ಚುನಾವಣೆ ಹತ್ತಿರ ಬಂದಂತೆ ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳು ಕಂಡು ಬರುತ್ತಿದ್ದು, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುವ ನಿರ್ಣಯ ಮಾಡಿದ್ದು ಇದೇ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸುಮಲತಾ ಅವರ ಬೆನ್ನಿಗೆ ನಿಂತಿದ್ದಾರೆ. ಅವರ ಪರ ಪ್ರಚಾರ ಮಾಡುವುದಾಗಿಯೂ ಘೋಷಿಸಿದ್ದಾರೆ. ಆದರೆ ಕಿಚ್ಚ ಸುದೀಪ್ ರನ್ನ ನೀವು ಸುಮಲತಾ ಅವರ ಪರ ಚುನಾವಣಾ ಪ್ರಚಾರ ಮಾಡುತ್ತೀರಾ ಎಂದು ಮಾದ್ಯಮದವರು ಪ್ರಶ್ನಿಸಿದ್ದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತೇ ….?

ಈಗಾಗಲೇ ದರ್ಶನ್ ಅಲ್ಲಿದ್ದಾರೆ. ಅವರೊಬ್ಬರಿದ್ದಾರೆ ಸಾಕು, ಬೇರೆ ಯಾರ ಅವಶ್ಯಕತೆನೂ ಇಲ್ಲ. ಅವರು ಎಲ್ಲಾ ನೋಡಿಕೊಳ್ಳುತ್ತಾನೆ.’ ಎಂದಿದ್ದಾರೆ. ಅಲ್ಲದೆ ನನಗೆ ರಾಜಕೀಯದ ಬಗ್ಗೆ ಅಷ್ಟೇನೂ ಅಸಕ್ತಿ ಇಲ್ಲ. ನನ್ನನ್ನು ನಂಬಿ ತುಂಬಾ ನಿರ್ಮಾಪಕರು ದುಡ್ಡು ಹಾಕಿದ್ದಾರೆ. ಹೀಗಾಗಿ ನನ್ನ ಸಪೋರ್ಟ್ ನಿರ್ಮಾಪಕರಿಗೆ ಎಂದ ಕಿಚ್ಚ ಸುದೀಪ್, ಅಂಬರೀಶ್ ಹೆಸರೊಂದೆ ಸಾಕು ಗೆಲ್ಲೋಕೆ. ಅದರ ಜತೆ ದರ್ಶನ್ ಒಬ್ಬರೇ ಸಾಕು ಗೆಲುವು ಪಡೆಯೋಕೆ ಎಂದು ಹೇಳಿದ್ದಾರೆ.

ವಿಷಯವೆಂದರೆ ಕಿಚ್ಚ ಸುದೀಪ್  ಕುಮಾರಸ್ವಾಮಿ ಕುಟುಂಬದವರೊಂದಿಗೆ ಆಪ್ತವಾಗಿದ್ದು, ಈ ಹಿಂದೆ ಕುಮಾರಸ್ವಾಮಿಯವರನ್ನೂ ಭೇಟಿ ನೆನೆಯಬಹುದು. ಸುಮಲತಾ ಪರ ಮಂಡ್ಯದಲ್ಲಿ ಇಡೀ ಸ್ಯಾಂಡಲ್ವುಡ್ ಪ್ರಚಾರಕ್ಕಿಳಿಯಲಿದೆ ಆದರೆ ಕಿಚ್ಚ ಸುದೀಪ್ ಮಾತ್ರ ಪ್ರಚಾರ ಮಾಡುವುದು ಅನುಮಾನ  ಎಂದು ಅವರ ಈ ಹೇಳಿಕೆಯಿಂದ ತಿಳಿದುಬರುತ್ತೆ. ಈ ಹಿಂದೆ ಶ್ರೀರಾಮಲು ಹಾಗೂ ಸಿದ್ದರಾಮಯ್ಯನವರ ಪ್ರಚಾರಕ್ಕೂ ತೆರಳಿದ್ದ ಸುದೀಪ್ ಪತ್ರಕರ್ತರು ಎಷ್ಟೇ ಬಾರಿ ಕೇಳಿದರೂ ಸೌಜನ್ಯಕ್ಕಾಗಿಯಾದರೂ ಹೋಗುವೆ ಎಂದು ಹೇಳಿದೆ ಇದ್ದುದು ಅವರ ನಿಲುವನ್ನು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *