ಟರ್ನರ್ ಸ್ಫೋಟಕ ಬ್ಯಾಟಿಂಗ್: ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಆಘಾತಕಾರಿ ಸೋಲು!

ನ್ಯೂಸ್ ಕನ್ನಡ ವರದಿ: ಭಾರತದ ವಿರುದ್ಧ ಇಲ್ಲಿ ನಡೆದ ಏಕದಿನ ಸರಣಿಯ 4 ನೇ ಪಂದ್ಯದಲ್ಲಿ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ಅಂತರದಿಂದ ಸಮಬಲ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಪರ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಸ್ಪೋಟಕ ಬ್ಯಾಟಿಂಗ್ ನಿಂದ ನಿಗದಿತ 50 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಆಸ್ಪ್ರೇಲಿಯಾಗೆ 358 ರನ್’ಗಳ ದೊಡ್ಡ ಸವಾಲನ್ನೇ ನೀಡಿತ್ತು.

ಭಾರತದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇಂದು ಬರೋಬ್ಬರಿ 193 ರನ್’ಗಳ ಜತೆಯಾಟ ಆಡುವ ಮೂಲಕ ಸಚಿನ್-ಸೆಹ್ವಾಗ್ ದಾಖಲೆ ಮುರಿದರು. ರೋಹಿತ್ ಶರ್ಮಾ ವಿಕೆಟ್ ಒಪ್ಪಿಸುವ ಮುನ್ನ ಭಾರತ 31 ಓವರ್’ಗಳಿಗೆ ಬರೋಬ್ಬರಿ 193 ರನ್’ಗಳ ಜತೆಯಾಟ ನಿಭಾಯಿಸಿತು. ರೋಹಿತ್ ಶರ್ಮಾ95(92)7 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿ 5 ರನ್ ನಿಂದ ಶತಕ ವಂಚಿತಗೊಂಡರು. ವಿಕೆಟ್ ಒಪಿಸಿದ್ದಾರೆ. ಆಟವನ್ನು ಮುಂದುವರೆಸಿದ ಧವನ್143(115)12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 16ನೇ ಏಕದಿನ ಶತಕ ಸಿಡಿಸಿ ಮಿಂಚಿದರು.

359 ರನ್‌ಗಳ ಗುರಿ ಬೆನ್ನಟ್ಟಿದ ಆಸೀಸ್‌ 3 ರನ್‌ಗೆ ಆರಂಭಿಕ ಆರೋನ್‌ ಫಿಂಚ್‌ ಅವರನ್ನು ಕಳೆದುಕೊಂಡು ಆರಂಭಿಕ ಅಘಾತಕ್ಕೆ ಸಿಲುಕಿತು, ಬಳಿಕ ಉಸ್ಮಾನ್‌ ಖ್ವಾಜಾ ತಂಡಕ್ಕೆ ಆಧಾರವಾದರು. ಅವರು 91 ರನ್‌ಗಳಿಸಿ ಔಟಾದರು. ಶಾನ್‌ ಮಾರ್ಶ್‌ 6 ಕ್ಕೆ ಔಟಾದರು. ಪೀಟರ್‌ ಹ್ಯಾಂಡ್ಸ್‌ಕೂಂಬ್‌ ಅವರು ಭರ್ಜರಿ ಶತಕ ಸಿಡಿಸಿ ಗೆಲುವಿನತ್ತ ಕೊಂಡೊಯ್ದರು. 117 ರನ್‌ಗಳಿಸಿ ಅವರು ಔಟಾದರು. ಮ್ಯಾಕ್ಸ್‌ವೆಲ್‌ 23 ರನ್‌ಗಳಿಸಿ ಔಟಾದರು. ಎಸೆತಗಳಿಂದ ರನ್‌ ಅಂತರ ಹೆಚ್ಚಿ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಆಪತ್‌ಬಾಂಧವನಾಗಿ ಬಂದ ಆಸ್ಟನ್‌ ಟರ್ನರ್‌ 43 ಎಸೆತಗಳಲ್ಲಿ 84 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಅವರು 6 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಸಿಡಿಸಿದರು. ಅಲೆಕ್ಸ್‌ ಕ್ರೇ 21 ರನ್‌ ಕೊಡುಗೆ ಸಲ್ಲಿಸಿ ಕೊನೆಯಲ್ಲಿ ನಿರ್ಗಮಿಸಿದರು. 47.5 ಓವರ್‌ಗಳಲ್ಲೇ 6 ವಿಕೆಟ್‌ ನಷ್ಟಕ್ಕೆ 359 ರನ್‌ಗಳಿಸಿದ ಆಸೀಸ್‌ ಗೆಲುವಿನ ಕೇಕೆ ಹಾಕಿತು. ಭಾರತದ ಪರ ಜಸ್‌ಪ್ರೀತ್ ಬುಮ್ರಾ 63ಕ್ಕೆ 3 ವಿಕೆಟ್ ಪಡೆದರು. ಹಲವು ಕ್ಯಾಚ್ ಕೈಚೆಲ್ಲಿದ ಭಾರತಕ್ಕೆ ಕಳಪೆ ಫೀಲ್ಡಿಂಗ್ ಮುಳುವಾಯಿತು.

Leave a Reply

Your email address will not be published. Required fields are marked *