ಟಾಲಿವುಡ್ನ ಖ್ಯಾತ ಹಾಸ್ಯನಟ ಅಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ!
ನ್ಯೂಸ್ ಕನ್ನಡ ವರದಿ: ಟಾಲಿವುಡ್ನ ಖ್ಯಾತ ಹಾಸ್ಯನಟ ಅಲಿ ಅವರು ವೈಎಸ್ಆರ್ ಕಾಂಗ್ರೆಸ್ ಪಾರ್ಟಿ ಸೇರ್ಪಡೆಗೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಆಡಳಿತ ಪಕ್ಷ ತೆಲುಗು ದೇಶಂ ಪಾಟಿ ಸೇರಿದಂತೆ ಮೂರು ಪ್ರಮುಖ ಪಕ್ಷಗಳು ಅಲಿ ಅವರ ಸೇರ್ಪಡೆಗೆ ಕಾಯುತ್ತಿದ್ದರು. ಈ ನಡುವೆ ಅಲಿ ಅವರು ವೈಎಸ್ಆರ್ ಪಕ್ಷದ ಜಗಮೋಹನ್ ರೆಡ್ಡಿ ಅವರನ್ನು ಇಂದು ತಮ್ಮ ನಿವಾಸ ಲೋಟಸ್ ಪಾಂಡ್ನಲ್ಲಿ ಭೇಟಿ ಮಾಡಿ ಔಪಚಾರಿಕವಾಗಿ ಪಕ್ಷ ಸೇರ್ಪಡೆಗೊಂಡರು. ಪೂರ್ವ ಗೋದಾವರಿಯ ರಾಜಮುಂಡ್ರಿಯವರಾದ ಅಲಿ ಅವರು ತಮ್ಮ ತವರು ಜಿಲ್ಲೆಯಲ್ಲಿ ಅಥವಾ ವಿಜಯವಾಡದಿಂದ ಸ್ಫರ್ಧಿಸಲು ಸಿದ್ದವಿರುವುದಾಗಿ ತಿಳಿಸಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತವಾದ ಸ್ಥಾನ ನೀಡುವ ಭರವಸೆಯೊಂದಿಗೆ ಪಕ್ಷಕ್ಕೆ ಪ್ರಚಾರ ಮಾಡಲು ಕಾಂಗ್ರೆಸ್ ಅಧ್ಯಕ್ಷರು ನನ್ನನ್ನು ಕೇಳಿದ್ದಾರೆ, ನಾನು ಸ್ಪರ್ಧಿಸಬೇಕಾದರೆ ನಾನು ಅದಕ್ಕೆ ಸಿದ್ಧವಾಗಿದ್ದೇನೆ ಎಂದು ಅಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಹಿಂದೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ನಟ ಕಲ್ಯಾಣ ಸಿಂಗ್ ಅವರ ಭೇಟಿ ಸೌಹಾರ್ದ ಭೇಟಿ ಎಂದು ಹೇಳುವ ಮೂಲಕ ಎದಿದ್ದು ಊಹಾಪೋಹಗಳಿಗೆ ತೆರೆ ಎಳೆದರು. ಈ ಇಬ್ಬರೂ ನಾಯಕರು ನನಗೆ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿರಲಿಲ್ಲ. ಜಗನ್ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರಿಂದ ಪಕ್ಷಕ್ಕೆ ಸೇರ್ಪಡೆಯಾದೆ ಎಂದು ಅಲಿ ತಿಳಿಸಿದರು.