ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆ ಖಚಿತ!: ಆರ್.ಅಶೋಕ್ ಗೆ ತೀವ್ರ ಮುಖಭಂಗ!

ನ್ಯೂಸ್ ಕನ್ನಡ ವರದಿ: ತೀವ್ರವಾಗಿದ್ದ ಬಹಿರಂಗ ಭಿನ್ನಮತದಿಂದ ಬಹುಚರ್ಚಿತವಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ, ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ಕಣಕ್ಕೆ ಇಳಿಸಲು ರಾಜ್ಯ ಬಿಜೆಪಿ ನಾಯಕರು ಒಪ್ಪಿಗೆ ನೀಡಿದ್ದಾರೆ. ತೇಜಸ್ವಿನಿ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದ ಆರ್.ಅಶೋಕ್ ಹೈಕಮಾಂಡ್ ನಿಂದ ಖಡಕ್ ಸೂಚನೆ ಹಾಗೂ ಎಚ್ಚರಿಕೆ ಬಂದ ನಂತರ ತಣ್ಣಗಾಗಿ ಅವರ ಮನೆಯಲ್ಲೇ ಸಭೆ ಕರೆದು ತೇಜಸ್ವಿನಿ ಸ್ಪರ್ಧೆಯ ವಿಷಯ ಸುದ್ದಿಗಾರರೊಂದಿಗೆ ಹಂಚಿಕೊಂಡರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಈ ಬಾರಿ ತೇಜಸ್ವಿನಿ ಅವರು ಬಿಜೆಪಿ ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಅವರನ್ನೇ ಪಕ್ಷದ ಅಭ್ಯರ್ಥಿ ಆಗಬೇಕು ಎಂಬ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಹೈಕಮಾಂಡ್ ಅವರಿಗೆ ನಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿ ಆಯ್ಕೆಯನ್ನು ತೀರ್ಮಾನ ಮಾಡುತ್ತದೆ. ಅನಂತಕುಮಾರ್ ಅವರು 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿ ಗೆಲುವು ಪಡೆದಿದ್ದರು. ಆದ್ದರಿಂದ ಈ ಬಾರಿ ತೇಜಸ್ವಿನಿ ಅವರನ್ನು ಗೆಲ್ಲಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.

ಈ ಮೂಲಕ ಅನಂತ್ ಕುಮಾರ್ ನಿಧನದ ನಂತರ ತಾನೇ ಆಧಿಪತ್ಯ ಸಾಧಿಸಬೇಕೆಂದು ಹೊರಟಿದ್ದ ಅಶೋಕ್ ಅವರಿಗೆ ಹೈಕಮಾಂಡ್ ಮೂಲಕವೇ ಎಚ್ಚರಿಕೆ ಕೊಡಿಸಿ ತೇಜಸ್ವಿನಿ ಟಿಕೆಟ್ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದು ಅಶೋಕ್ ಅವರಿಗೆ ತೀವ್ರ ಮುಖಭಂಗವಾಗಿದೆ.

Leave a Reply

Your email address will not be published. Required fields are marked *