ಉಡುಪಿ ಬಿಜೆಪಿ ಟಿಕೆಟ್ ರೇಸಿನಿಂದ ಶೋಭಾ ಕರಂದಾಜ್ಲೆ ಔಟ್? ಮತ್ಯಾರಿಗೆ ಟಿಕೆಟ್?!
ನ್ಯೂಸ್ ಕನ್ನಡ ವರದಿ: ತೀವ್ರ ಕುತೂಹಲ ಕೆರಳಿಸಿದ್ದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಲಾಬಿ ಇದೀಗ ಅನಿರೀಕ್ಷಿತ ತಿರುವು ಕಂಡಿದ್ದು, ಕೆಲವು ದಿನಗಳ ಹಿಂದೆ ‘ಮಾಜಿ ಪುರುಷ ಸಂಸದರೇ’ ಎಂದು ಪಕ್ಷದ ಒಳಗಿನ ಹಾಗೂ ಹೊರಗಿನ ವಿರೋಧಿಗಳಿಗೆ ಆಕ್ರೋಶದಿಂದ ಉತ್ತರ ನೀಡಿದ್ದ ಶೋಭಾ ಕರಂದಾಜ್ಲೆ ಇದೀಗ ಆಕಾಂಕ್ಷಿ ರೇಸಿನಿಂದಲೇ ಹಿಂದೆ ಸರಿದಿರುವಂತೆ ಕಾಣುತ್ತಿದೆ.
ಬಿಜೆಪಿ ವರಿಷ್ಠರು, ಸಂಸದೀಯ ಮಂಡಳಿ ಯಾರಿಗೆ ಟಿಕೆಟ್ ನೀಡುತ್ತಾರೆ ಅವರ ಪರವಾಗಿ ನಾನು ಸೇರಿದಂತೆ ಎಲ್ಲರೂ ಕಾರ್ಯನಿರ್ವಹಿಸುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಟಿಕೆಟ್ ಅಪೇಕ್ಷಿಸುವುದು ತಪ್ಪಲ್ಲ, ಆದರೆ ಪಕ್ಷದ ವಿರುದ್ಧ ಕೆಲಸ ಮಾಡಬಾರದು ಎಂದು ಶೋಭಾ ಅವರ ವಿರುದ್ಧ ನಡೆದ ‘ಗೋಬ್ಯಾಕ್’ ಕ್ಯಾಂಪೇನ್ ವಿಷಯವನ್ನು ಪ್ರಸ್ತಾಪಿಸಿದಾಗ ಈ ರೀತಿ ಉತ್ತರಿಸಿದರು. ಕೇಂದ್ರದ ಭದ್ರತೆ ಸಮಿತಿ ಸದಸ್ಯೆ ಆಗಿದ್ದು ನಾನು ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಆಗಿದ್ದರಿಂದ ಜಿಲ್ಲೆಯಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚು ಪ್ರವಾಸ ಮಾಡುವುದಾಗಿ ತಿಳಿಸಿದರು.
ಇನ್ನು ಟಿಕೆಟ್ ಜಯಪ್ರಕಾಶ್ ಹೆಗ್ಡೆ, ವಿಲಾಸ್ ನಾಯಕ್ ಹಾಗೂ ಮೊಗವೀರ ನಾಯಕ ಯಶ್ಪಾಲ್ ಸುವರ್ಣ ನಡುವೆ ಸ್ಪರ್ಧೆ ಇದ್ದು. ಜಯಪ್ರಕಾಶ್ ಹೆಗ್ಡೆ ಪರ ಜಾಸ್ತಿ ಒಲವು ಇದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.