ಸುಮಲತ ಬಿಜೆಪಿಗೆ ಬಂದರೆ ಸ್ವಾಗತ!: ಎರಡನೇ ಭೇಟಿಯ ನಂತರ ಆರ್.ಅಶೋಕ್

ನ್ಯೂಸ್ ಕನ್ನಡ ವರದಿ: ಮಂಡ್ಯ ಲೋಕಸಭಾ ಟಿಕೆಟ್ ಕುರಿತು ದಿನೇ ದಿನೇ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಬಹಳಷ್ಟು ಆಳವಾದ ಲೆಕ್ಕಾಚಾರದಿಂದ ಕೂಡಿದ್ದು, ಮೈತ್ರಿ ಸರ್ಕಾರದ ಪಕ್ಷಗಳು ನೇರ ಬೆಂಬಲ, ಬಾಹ್ಯ ಬೆಂಬಲ, ಹಿಂಬಂದಿ ಬಾಗಿಲಿನಿಂದ ಬೆಂಬಲ, ಈ ರೀತಿ ಹಲವಾರು ಯೋಚನೆ, ಯೋಜನೆಗಳನ್ನು ರಾಜಕೀಯ ಪಕ್ಷಗಳು ರೂಪಿಸುತ್ತಿದೆ. ಈ ಮಧ್ಯೆ ಬಿಜೆಪಿ ಮುಖಂಡ ಆರ್ ಅಶೋಕ್ ಸುಮಲತಾ ಅವರನ್ನು ಎರಡನೇ ಬಾರಿ ಭೇಟಿಯಾಗಿ ಅವರೊಂದಿಗೆ ಬಿಜೆಪಿ ಪಕ್ಷಕ್ಕೆ ಬರುವ ಕುರಿತು ಸಾಧ್ಯತೆಗಳನ್ನು ಚರ್ಚಿಸಿದರು.

ಭಾರತೀಯ ಜನತಾ ಪಕ್ಷಕ್ಕೆ ಬರುವುದಾದರೆ ನಾವು ಸ್ವಾಗತ ಮಾಡುತ್ತೇವೆ. ಯಾರನ್ನೂ ನಾವು ಬಲವಂತ ಮಾಡಲ್ಲ. ಅವರು ನಮ್ಮ ಪಾರ್ಟಿಯಿಂದ ನಿಲ್ಲುತ್ತಾರಾ ಅಥವಾ ಪಕ್ಷೇತರವಾಗಿ ನಿಲ್ಲುತ್ತಾರೆಯಾ ಎಂಬ ಗೊಂದಲ ಇದೆ. ಇದು ತೀರ್ಮಾನವಾದ ಮೇಲೆ ನಮ್ಮ ಪಾರ್ಟಿಯ ನಿಲುವನ್ನು ಹೇಳುತ್ತೇವೆ, ಈಗಾಗಲೇ ನಮ್ಮ ನಾಯಕರು ಅವರ ಜೊತೆ ಮಾತನಾಡಲು ಹೇಳಿದ್ದಾರೆ. ಹೀಗಾಗಿ ನಾನು ಅವರ ಜೊತೆ ಮಾತನಾಡುತ್ತಿದ್ದೇನೆ. ನಮ್ಮದು ರಾಷ್ಟ್ರೀಯ ಪಾರ್ಟಿ. ಆದ್ದರಿಂದ ನನಗೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಈಗಾಗಲೇ ನಡೆದಿರುವ ಮಾತುಕತೆಯ ಬಗ್ಗೆ ನಮ್ಮ ನಾಯಕರಿಗೆ ತಿಳಿಸಿದ್ದೇನೆ. ಇಂದು ಮತ್ತೊಮ್ಮೆ ಮಾತುಕತೆ ಮಾಡಿ ಅವರಿಗೆ ಹೇಳುತ್ತೇನೆ. ನಂತರ ಅವರು ಏನು ತೀರ್ಮಾನ ಮಾಡುತ್ತಾರೆ ಅದು ಅಂತಿಮವಾಗುತ್ತದೆ ಎಂದು ಮಾತುಕತೆ ನಂತರ ಅಶೋಕ್ ಮಾಧ್ಯಮದವರಿಗೆ ತಿಳಿಸಿದರು.

Leave a Reply

Your email address will not be published. Required fields are marked *