ಕಾಶ್ಮೀರ ಸ್ವತಂತ್ರ ರಾಷ್ಟ್ರವಾಗುವುದು ಸಮಸ್ಯೆಗೆ ಪರಿಹಾರವಲ್ಲ: ಫಾರೂಕ್ ಅಬ್ದುಲ್ಲಾ

ನ್ಯೂಸ್ ಕನ್ನಡ ವರದಿ(08-04-2018): ಒಂದು ಕಡೆ ಚೀನಾ ಇನ್ನೊಂದು ಕಡೆ ಪಾಕಿಸ್ತಾನ ಮತ್ತೊಂದು ಕಡೆ ಭಾರತದ ಗಡಿಯನ್ನು ಹೊಂದಿರುವ ಕಾಶ್ಮೀರವು ಸ್ವತಂತ್ರವಾಗುವುದರಿಂದ ನಮ್ಮ ಸಮಸ್ಯೆ ಪರಿಹಾರವಾಗಲಾರದು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.

ಪೂಂಚ್ ಜಿಲ್ಲೆಯ ಮಂಡಿಯಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಸ್ವಾತಂತ್ಯಗೊಳ್ಳುವುದು ಪರಿಹಾರವಲ್ಲ. ಒಂದುಕಡೆಯಲ್ಲಿ ಪರಮಾಣು ಸಾಮರ್ಥ್ಯವುಲ್ಲ ಚೀನಾ ಹಾಗೂ ಪಾಕಿಸ್ತಾನ, ಮತ್ತೊಂದು ಕಡೆಯಲ್ಲಿ ಭಾರತದ ಭೂಪ್ರದೇಶಕ್ಕೆ ಚಾಚಿಕೊಂಡು ಕಾಶ್ಮೀರವಿದೆ. ನಮ್ಮಲ್ಲಿ ಪರಮಾಣು ಬಾಂಬ್ ಇಲ್ಲ, ಸೈನ್ಯವಿಲ್ಲ ಹಾಗೂ ಜೆಟ್ ವಿಮಾನವಿಲ್ಲ. ನಾವು ಸ್ವತಂತ್ರ ರಾಷ್ಟ್ರವಾಗಿ ಹೇಗೆ ಬದುಕುವುದು ಎಂದು ಪ್ರಶ್ನಿಸಿದರು.

ಭಾರತವು ಕಾಶ್ಮೀರದ ಜನತೆಯ ಘನತೆಯನ್ನು ಗೌರವಿಸಬೇಕು ಇಲ್ಲದಿದ್ದರೆ ಕಾಶ್ಮೀರದ ಪರಿಸ್ಥಿತಿ ಬದಲಾಗಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿನ ಪರಿಸ್ಥಿತಿ ಇದೀಗ ಭೀತಿಕರ ವಾತಾವರಣಕ್ಕೆ ತಿರುಗಿದೆ. ಚಿಕ್ಕ ಮಕ್ಕಳು ತಮ್ಮ ಕೈಗಳಲ್ಲಿ ಗನ್ ಹಿಡಿದು ಸಿದ್ಧರಾಗಿ ನಿಲ್ಲುತ್ತಿದ್ದಾರೆ. ಭಯೋತ್ಪಾದನೆ ಪಾಕಿಸ್ತಾನದಿಂದಲೇ ಬರುತ್ತಿರಬಹುದು. ಆದರೆ, ನಾವು ಅದಕ್ಕೆ ಬೆಂಬಲ ನೀಡದೇ ಹೋದರೆ, ಅದು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *