ಕಾಂಗ್ರೆಸ್ ಸರ್ಕಾರ, ಪಾಕ್ ವಿರುದ್ಧ 12 ಸರ್ಜಿಕಲ್ ಸ್ಟ್ರೈಕ್, 2 ಯುಧ್ಧ ಗೆದ್ದಿದ್ದೆ, ಅದನ್ನು ರಾಜಕೀಯಕ್ಕೆ ಉಪಯೋಗಿಸಿಲ್ಲ!: ಸಿದ್ದು
ನ್ಯೂಸ್ ಕನ್ನಡ ವರದಿ: ಚಾಮರಾಜನಗರದಲ್ಲಿ ಪರಿವರ್ತನಾ ರ್ಯಾಲಿಯಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪಾಕಿಸ್ತಾನದ ವಿರುದ್ಧ ಕಾಂಗ್ರೆಸ್ ಅವಧಿಯಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವು. ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿದ್ದೇವು. ಆದರೆ ಈಗ ಪದೇ ಪದೇ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳುವ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟ್ಟಿದ್ದಾರೆ ಎಂದು ಮೋದಿಯವರನ್ನು ಟೀಕಿಸಿದರು.
ಕಳೆದ ಲೋಕಸಭಾ ಚುನಾವಣೆ ಪ್ರಚಾರ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರ ಅಕೌಂಟ್ಗೆ 15 ಲಕ್ಷ ಹಣ ಹಾಕ್ತೀವಿ ಎಂದು ಮೋದಿಯವರು ಭಾಷಣ ಬಿಗಿದರು, ಆದರೆ 15 ಲಕ್ಷ ಇರಲಿ 15 ಪೈಸೆನೂ ಹಾಕಲಿಲ್ಲ. ನಿಮಗೆ ಯಾರೋಬ್ಬರಿಗೆ 15 ರೂ. ಬಂದಿದ್ದರೆ ನಾನು ಮೋದಿ ಬಗ್ಗ ಟೀಕೆ ಮಾಡುವುದನ್ನು ಬಿಡುತ್ತೇನೆ ಎಂದು ಸವಾಲು ಹಾಕಿದರು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿದೆ. ಆದರೆ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಯಾಗಲಿಲ್ಲ. ಲಕ್ಷಾಂತರ ಕೋಟಿ ಉಳಿತಾಯವಾಗಿದೆ. ಎಲ್ಲಿ ಹೋಯ್ತು ಈ ಹಣ ರಾಷ್ಟ್ರದ ಜನತೆಗೆ ಲೆಕ್ಕ ಕೊಡಿ ಎಂದು ನೇರವಾಗಿ, ಸತತವಾಗಿ ಮೋದಿ ವಿರುದ್ಧ ಪ್ರಶ್ನೆಯ ಸುರಿಮಳೆಗೈದರು.