ಪ್ರತಾಪ್ ಸಿಂಹ ಕೇವಲ ಕಾಗದದ ಸಿಂಹ!: ಸಂಸದನ ವಿರುದ್ಧ ಗುಡುಗಿದ ಪಾಠ ಹೇಳಿಕೊಟ್ಟ ಗುರು

ನ್ಯೂಸ್ ಕನ್ನಡ ವರದಿ : ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಪತ್ರಿಕೋದ್ಯಮದ ಪಾಠ ಹೇಳಿಕೊಟ್ಟ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮಾಜಿ ಮುಖ್ಯಸ್ಥ ಪ್ರೋ. ಮಹೇಶ್ ಚಂದ್ರಗುರು, ಮೈಸೂರಿನ ಪತ್ರಕರ್ತರ ಭವನದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರತಾಪ್ ಸಿಂಹ ಅದೆಂಥಾ ಸಿಂಹ ಎಂದು ಗುಡುಗಿರು ಮಹೇಶ್ ಚಂದ್ರಗುರು, ಅವನು ನನ್ನ ಶಿಷ್ಯನಾಗಿದ್ದ ಆತನ ಬಗ್ಗೆ ಎಲ್ಲವೂ ಬಲ್ಲೆ ಎಂದು ಹೇಳಿದರು.

ಪ್ರತಾಪ್ ಸಿಂಗ್ ಬರೀ ಕಾಗದದ ಸಿಂಹ ಎಂದಿರುವ ಮಹೇಶ್ ಚಂದ್ರಗುರು, ಅವನಂತ ಉಗ್ರಗಾಮಿಗೆ ಮತ ಏಕೆ ಹಾಕಬೇಕು ಎಂದು ಕೇಳಿದ್ದಾರೆ. ಇದೇ ವೇಳೆ ಚಾಮರಾಜನಗರ ಸಂಸದ ಧೃವನಾರಾಯಣ್ ಅವರನ್ನು ಹೊಗಳಿರುವ ಮಹೇಶ್, ಅವರು ರಾಜ್ಯದಲ್ಲೇ ಉತ್ತಮ ಸಂಸದರು ಎಂದು ಶಹಬ್ಬಾಸಗಿರಿ ನೀಡಿದ್ದಾರೆ. ಧೃವನಾರಾಯಣ್ ದೇಶದಲ್ಲೇ ಕ್ಷೇತ್ರ ಅಭಿವೃದ್ಧಿಗೊಳಿಸಿದ ನಾಲ್ಕನೇ ಉತ್ತಮ ಸಂಸದ ಎಂದು ಮನ್ನಣೆ ಪಡೆದಿದ್ದಾರೆ. ಅಂತವರನ್ನು ಗೆಲ್ಲಿಸದೇ ಇನ್ಯಾರನ್ನು ಗೆಲ್ಲಿಸುತ್ತೀರಾ ಎಂದು ಮಹೇಶ್ ಚಂದ್ರಗುರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *