ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಜಂಟಿ ಆಶ್ರಯದಲ್ಲಿ ಕುಪ್ಪೆಪದವಿನಲ್ಲಿ ಯಶಸ್ವೀ ರಕ್ತದಾನ ಶಿಬಿರ

ಕುಪ್ಪೆಪದವು,ಮಾರ್ಚ್ 26: ಸೋಲಿಡಾರಿಟಿ ಯೂತ್ ಮೂಮೆಂಟ್ ಕುಪ್ಪೆಪದವು ಮತ್ತು N.F.C (ರಿ) ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ದಿನಾಂಕ 24/03/2019ನೇ ಆದಿತ್ಯವಾರದಂದು ಕುಪ್ಪೆಪದವಿನ ಕಾವೇರಿ ವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆಯಿತು.

ಶಿಬಿರದ ಸಭಾ ಕಾರ್ಯಕ್ರಮವನ್ನು N.F.C (R) ಅಧ್ಯಕ್ಷರಾದ ಜನಾಬ್ ಮುಸ್ತಫರವರ ಅಧ್ಯಕ್ಷತೆಯಲ್ಲಿ ಸಮಾಗಮ ಸೇವಾಕೇಂದ್ರದ ಶ್ರೀ ಕೆ ಪುರುಷೋತ್ತಮ,ಸೋಲಿಡಾರಿಟಿ ಯೂತ್ ಮೂಮೆಂಟ್ ಉಪಾಧ್ಯಕ್ಷ ಜನಾಬ್ ಶಫೀಕ್ ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಸಲಹೆಗಾರ ಜನಾಬ್ ಮುಸ್ತಫಾ ಅಡ್ಡೂರು ದೆಮ್ಮಲೆಯವರ ಘನ ಉಪಸ್ಥಿತಿಯಲ್ಲಿ ಸಮಾಜ ಸೇವಕರಾದ ಜನಾಬ್ ಮುನೀರ್ ನಡುಪಲ್ಲರವರು ಉದ್ಘಾಟಿಸಿದರು.

ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 77 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ತನ್ನ ಎರಡೂ ಕಣ್ಣು ಕಳೆದುಕೊಂಡು ಅಂಗವೈಕಲ್ಯವಾಗಿದ್ದರೂ, ಮೂರನೇ ಬಾರಿಗೆ ರಕ್ತದಾನ ಮಾಡಿದ ಝಕರಿಯಾ ಆಚಾರಿಜೋರರವರು, ಅಂಗವೈಕಲ್ಯರಾಗಿದ್ದವರೂ, ಆರೋಗ್ಯವಾಗಿದ್ದವರೂ, ಯಾರು ಕೂಡ ರಕ್ತದಾನ ಮಾಡಬಹುದೆನ್ನುವುದನ್ನು ಸಮಾಜಕ್ಕೆ ತೋರಿಸಿ ಮಾದರಿಯಾದರು.

ಮುಖ್ಯ ಅತಿಥಿಗಳಾಗಿ ಸುಲೈಮಾನ್,ನ್ಯಾಯವಾದಿ ಪುನೀತ್,ಹಸನ್ ಬಾವಾ,ಅಬ್ದುಲ್ ಖಾದರ್,ಫೈಝಲ್ ಮಂಚಿ, ಶರೀಫ್ ನೆಲಚ್ಚಿಲ್,ಕೆ.ಪಿ ಉಮರಬ್ಬ,ಶರೀಫ್,ಪ್ರವೀಣ್ ಆಳ್ವ,ಜಬ್ಬಾರ್, ಯಾದವ್ ಬಳ್ಳಿ,ಜಗದೀಶ್ ಪಾಕಜೆ,ಅಬ್ದುಲ್ ರಝಾಕ್,ನೌಶಾದ್,ಸಿದ್ದೀಕ್,ತಾಜಿದಾರ್,ಪುನೀತ್ ಕುಮಾರ್,ನಝೀರ್ ಹಳೆ ನೀರು,ಹನೀಫ್ ಕುಳವೂರು,ಸತೀಶ್ ಬಳ್ಳಾಜೆ, ಮಹಾಬಲ ಸಾಲ್ಯಾನ್, ಅರುಣ್ ಕುಮಾರ್ ಹಾಗೂ ಸೋಲಿಡಾರಿಟಿ ಯೂತ್ ಮೂಮೆಂಟ್ ಕುಪ್ಪೆಪದವು ಮತ್ತು N.F.C (ರಿ) ಕುಪ್ಪೆಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆಯ ಸಿಬಂದಿ ವರ್ಗಕ್ಕೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ).

Leave a Reply

Your email address will not be published. Required fields are marked *