ಭಾರತ ಮತ್ತು ಪಾಕಿಸ್ತಾನದ ಯುವಕರು ಒಗ್ಗಟ್ಟಿನಲ್ಲಿ ನಿಂತು ಸಮಸ್ಯೆಗಳನ್ನು ನಿವಾರಿಸಬೇಕು: ಶೋಯಬ್ ಅಕ್ತರ್

ನ್ಯೂಸ್ ಕನ್ನಡ ವರದಿ-(08.04.18): ಕಾಶ್ಮೀರದಲ್ಲಿ ಭಾರತೀಯ ಯೋಧರು ಅಮಾಯಕ ಕಾಶ್ಮೀರಿ ಯುವಕರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಈ ಕುರಿತಾದಂತೆ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಸಾಮಾಜಿಕ ತಾಣಗಳಿಂದ ಟೀಕೆಗಳ ಮಹಾಪೂರವೇ ಹರಿದಿತ್ತು. ಇದೀಗ ಕಾಶ್ಮೀರದ ವಿಚಾರದ ಕುರಿತಾದಂತೆ ಪ್ರಸ್ತಾಪಿಸಿ ಪಾಕಿಸ್ತಾನ ಕ್ರಿಕೆಟ್ ತಂಡ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್, ನಮ್ಮ ನಡುವೆ ಹಲವು ಬಗೆಹರಿಯದ ಸಮಸ್ಯೆಗಳಿವೆ. ಅವುಗಳನ್ನು ಪಾಕಿಸ್ತಾನದ ಮತ್ತು ಭಾರತದ ಯುವಕರು ಒಗ್ಗಟ್ಟಾಗಿ ನಿಂತು ಬಗೆಹರಿಸಿಕೊಳ್ಳಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಕಾಶ್ಮೀರದ ಕುರಿತಾದಂತೆ ಟ್ವೀಟ್ ಮಾಡಿಸ ಶೋಯಬ್ ಅಖ್ತರ್, ಹಲವು ವರ್ಷಗಳಿಂದ ಹಲವು ಸಮಸ್ಯೆಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ಸೃಷ್ಟಿಯಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನದ ಯುವಕರು ಒಟ್ಟಾಗಬೇಕಾಗಿದೆ. 70 ವರ್ಷಗಳಿಂದ ಬಗೆಹರಿಯದೇ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಇದೇ ದ್ವೇಷದಿಂದಲೇ ಇನ್ನೂ ಮುಂದಿನ 70 ವರ್ಷ ಜೀವಿಸಲು ಇಷ್ಟಪಡುತ್ತೀರಾ? ಎಂದು ಶೋಯಬ್ ಅಖ್ತರ್ ಪ್ರಶ್ನಿಸಿದ್ದಾರೆ.

https://twitter.com/shoaib100mph/status/982574656354963456

Leave a Reply

Your email address will not be published. Required fields are marked *