ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ, ಛಾನ್ಸೇ ಇಲ್ಲ!: ಸಚಿವ (ಜೊತೀಷ್ಯ) ಎಚ್.ಡಿ ರೇವಣ್ಣ

ನ್ಯೂಸ್ ಕನ್ನಡ ವರದಿ: ದೇಶಾದ್ಯಂತ ಪಕ್ಷಗಳು ಲೋಕಸಭಾ ಚುನಾವಣೆಗೆ ಸಕಲ ತಯಾರಿಯಲ್ಲಿ ಮುಳುಗಿದ್ದು, ಚುನಾವಣೆ ಕಣ ರಂಗೇರಿದೆ. ಕರ್ನಾಟಕದಲ್ಲೂ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ಹಲವು ಗೊಂದಲಗಳ ಅಸಮಾಧಾನಗಳ ನಡುವೆಯೂ ನಾಮಪತ್ರ ಸಲ್ಲಿಕೆ ನಡೆದಿದೆ.

ಈ ಮಧ್ಯೆ ಸಚಿವ ರೇವಣ್ಣ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಹಳ ಆತ್ಮವಿಶ್ವಾಸದಿಂದ ಜೊತೀಷ್ಯದ ಪ್ರಕಾರ ಈ ಬಾರಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲ್ಲ, ಪ್ರಧಾನಿ ಆಗಲ್ಲ ಎಂದು ಹೇಳಿದ್ದಾರೆ. ನಾನು ಈ ಹಿಂದೆ ಹೇಳಿದ್ದೂ ನಿಜವಾಗಿದ್ದು, ಇದೂ ನಿಜವಾಗಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾನೆ ಎಂದಿದ್ದೆ, ಫೆಬ್ರವರಿ 8ಕ್ಕೆ ಬಜೆಟ್ ಮಂಡನೆ ಮಾಡುತ್ತಾರೆ ಎಂದಿದ್ದೆ ನಿಜವಾಗಿದೆ. ಯಡಿಯುರಪ್ಪ ಮುಖ್ಯಮಂತ್ರಿ ಕನಸೂ ನನಸಾಗಲ್ಲ, ಅದೇ ರೀತಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲ್ಲ ಇದು ನೀವು ನೋಡ್ತಾ ಇರಿ ಎಂದು ಹೇಳಿದರು

Leave a Reply

Your email address will not be published. Required fields are marked *