ನರೇಂದ್ರ ಮೋದಿ ಬಾಲಿವುಡ್ ಸೇರಿದ್ದರೆ ಒಳ್ಳೆಯ ನಟರಾಗುತ್ತಿದ್ದರು: ರಾಜಸ್ಥಾನದ ಸಿಎಂ ಗೆಹ್ಲೋಟ್ ವ್ಯಂಗ್ಯ
ನ್ಯೂಸ್ ಕನ್ನಡ ವರದಿ: ಕಾವೇರಿದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಸ್ಥಾನದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಜುಂಬ್ಲೆಬಾಜಿ (ವಾಕ್ಚಾತುರ್ಯ), ಡ್ರಾಮಾಬಾಜಿ (ನಟನೆ) ಮೋದಿ ಅವರ ಸ್ವಭಾವದಲ್ಲಿಯೇ ಇದೆ. ಅವರು ಬಾಲಿವುಡ್ ಸೇರಿ ಒಳ್ಳೆಯ ನಟರಾಗಬಹುದಿತ್ತು, ಚೆನ್ನಾಗಿ ನಟನೆ ಮಾಡುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.
ಈ ರೀತಿಯ ನಟನೆಯಲ್ಲಿ ಸತ್ಯ, ವಾಸ್ತವವಿರುವುದಿಲ್ಲ. ಹಾಗೆಯೇ ಮೋದಿ ಅವರು ಸತ್ಯವನ್ನು ಹೇಳುವುದನ್ನು ಬಿಟ್ಟು, ಸುಳ್ಳಿನ ಆಸರೆಯಲ್ಲಿ ನಟಿಸುತ್ತಾರೆ. ನಟನೆ ದೇಶಕ್ಕೇನೂ ಒಳ್ಳೆಯದನ್ನು ಮಾಡಿಲ್ಲ. ಬರೀ ನಟನೆಯಿಂದ ಅಭಿವೃದ್ಧಿಯೂ ಆಗಲ್ಲ, ಯಾರ ಹಸಿವು ಕೂಡ ನೀಗಲ್ಲ ಎಂದು ಕಿಡಿಕಾರಿದರು. ದೇಶ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇಂದು ಅಪಾಯದಲ್ಲಿದೆ. ನಾವು ಸಂಪೂರ್ಣ ಬಲ ಮತ್ತು ಸಾಮಥ್ರ್ಯದೊಂದಿಗೆ ಚುನಾವಣೆಯನ್ನು ಎದುರಿಸದಿದ್ದರೆ ಬಿಜೆಪಿ ನಮ್ಮ ದೇಶವನ್ನು ನಿರ್ನಾಮ ಮಾಡುತ್ತಾರೆ ಅಂತ ಆತಂಕ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಬಿಜೆಪಿ ಸರ್ಕಾರ ರಾಜ್ಯದ ಮತ್ತು ದೇಶದ ಆರ್ಥಿಕತೆಯನ್ನು ನಾಶಮಾಡುತ್ತಿದೆ ಎಂದು ಆರೋಪಿಸಿದರು.