‘ಮೈ ಬಿ ಚೌಕಿದಾರ್’ ಕಪ್ ಮೂಲಕ ಚಹಾ ಸರಬರಾಜು ಮಾಡಿ, ತಪ್ಪೊಪ್ಪಿಕೊಂಡ ರೈಲ್ವೆ ಇಲಾಖೆ!

ನ್ಯೂಸ್ ಕನ್ನಡ ವರದಿ : ಪ್ರಧಾನಿ ಮೋದಿಯವರು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಇತ್ತೀಚಿಗೆ ಮೈ ಬಿ ಚೌಕಿದಾರ್ ಅಭಿಯಾನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಚಾಲನೆ ನೀಡಿದ್ದರು.ಇದಾದ ನಂತರ ಬಿಜೆಪಿ ಇದನ್ನು ತನ್ನು ಪ್ರಚಾರ ಕಾರ್ಯಕ್ರಮಕ್ಕೆ ವ್ಯಾಪಕವಾಗಿ ಬಳಸಲು ಪ್ರಾರಂಭಿಸಿತು. ಇದರ ಪರಿಣಾಮ ಈಗ ರೈಲ್ವೆಗೂ ತಟ್ಟಿದೆ. ರೈಲ್ವೆಯೊಂದರಲ್ಲಿ ಈಗ ಮೈ ಬಿ ಚೌಕಿದಾರ್’ ಕಪ್ ಮೂಲಕ ರೈಲ್ವೆಯಲ್ಲಿ ಚಹಾ ಸರಬರಾಜು ಮಾಡಲಾಗಿದೆ.ಈಗ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನಂತರ ಈ ತಪ್ಪನ್ನು ಒಪ್ಪಿಕೊಂಡ ಐಆರ್ಸಿಟಿಸಿ ನಂತರ ತಕ್ಷಣ ಈ ಕಪ್ ನ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಚಹಾ ಕಪ್ ನಲ್ಲಿ ಸಂಕಲ್ಪ ಫೌಂಡೇಶನ್ ಜಾಹಿರಾತನ್ನು ಕೂಡ ಪ್ರಕಟಿಸಲಾಗಿದೆ ಎಂದು ತಿಳಿದುಬಂದಿದೆ.

“ಮೈ ಬಿ ಚೌಕಿದಾರ್ ಲೇಬಲ್ ಹೊಂದಿರುವ ಕಪ್ ಮೂಲಕ ಚಹಾವನ್ನು ಸರಬರಾಜು ಮಾಡಿರುವ ವಿಚಾರವಾಗಿ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.ಈ ಹಿನ್ನಲೆಯಲ್ಲಿ ಇದನ್ನು ತನಿಖೆಗೆ ಒಳಪಡಿಸಲಾಗುತ್ತದೆ.ಇದು ಐಆರ್ಸಿಟಿಸಿ ಒಪ್ಪಿಗೆ ಇಲ್ಲದೆ ನಡೆದಿದೆ ಎಂದು ಅದು ತನ್ನ ಹೇಳಿಕೆಯನ್ನು ಪ್ರಕಟಿಸಿದೆ. ಕಥಗೊಡಂ ಶತಾಬ್ದಿ ರೈಲಿನ ಪ್ರಯಾಣಿಕನೊಬ್ಬನು ಈ ಪೇಪರ್ ಕಪ್ ನ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾನೆ.ನಂತರ ಇದನ್ನು ರೈಲ್ವೆ ಇಲಾಖೆ ತಕ್ಷಣ ಈ ಕಪ್ ಮೂಲಕ ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ್ದಲ್ಲದೆ ಟೆಕೆದಾರನಿಗೆ 1 ಲಕ್ಷರೂ ದಂಡವನ್ನು ವಿಧಿಸಲಾಗಿದೆ.

Leave a Reply

Your email address will not be published. Required fields are marked *