ನೂರಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಪಕರಿಂದ ‘ಬಿಜೆಪಿ ಓಡಿಸಿ, ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ..!

ನ್ಯೂಸ್ ಕನ್ನಡ ವರದಿ: ಲೋಕಸಭಾ ಚುನಾವಣೆ ಹತ್ತಿರ ಬಂದಂತೆ ತೀವ್ರ ರಾಜಕೀಯ ಬೆಳವಣಿಗೆಗಳು, ಸಾಮಾಜಿಕ ಬೆಳವಣಿಗೆಗಳು ಕಂಡುಬರುತ್ತಿದ್ದು, ಇದೀಗ ನೂರಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಪಕರು ಒಟ್ಟುಗೂಡಿ ಪ್ರಜಾಪ್ರಭುತ್ವ ಉಳಿಸಿ-ಬಿಜೆಪಿಯನ್ನು ಹೊರಗಿಡಿ ಎಂಬ ಹೇಳಿಕೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸದಂತೆ ಕರೆ ನೀಡಿದ್ದಾರೆ.

ದೇಶದಲ್ಲಿ ರಾಜಕೀಯ ಧ್ರುವೀಕರಣ ಮತ್ತು ದ್ವೇಷ ರಾಜಕಾರಣ, ದಲಿತರು, ಮುಸ್ಲಿಮರು ಮತ್ತು ರೈತರ ನಿರ್ಲಕ್ಷ್ಯ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸೇರಿದಂತೆ ಹಲವು ದಮನಕಾರಿ ನೀತಿಗಳನ್ನು ಬಿಜೆಪಿ ಸರ್ಕಾರ ಅನುಸರಿಸುತ್ತಿದೆ ಎಂಬುದು ನಿರ್ಮಾಪಕರ ಆರೋಪವಾಗಿದೆ. ಹಿರಿಯ ಸಾಕ್ಷ್ಯ ಚಿತ್ರನಿರ್ದೇಶಕ ಆನಂದ್ ಪಟ್ವರ್ಧನ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ವೆಟ್ರಿ ಮಾರನ್, ಜನಪ್ರಿಯ ಮಲಯಾಳಂ ಚಲನಚಿತ್ರ ನಿರ್ಮಾಪಕ / ನಿರ್ದೇಶಕ ಆಶಿಕ್ ಅಬು, ಉತ್ಸವ ನಿರ್ದೇಶಕ ಬಿನಾ ಪಾಲ್ ಮತ್ತು ಇತರ ಪ್ರಸಿದ್ಧ ಸ್ವತಂತ್ರ ಚಿತ್ರ ನಿರ್ಮಾಪಕರು ಗುರುವೀಂದರ್ ಸಿಂಗ್ , ದೇವಶಿಶ್ ಮಖೀಜಾ, ಪುಷ್ಪೇಂದ್ರ ಸಿಂಗ್, ಸನಾಲ್ ಕುಮಾರ್ ಸಾಸಿಧರನ್ ಮತ್ತು ಕಬೀರ್ ಸಿಂಗ್ ಚೌಧರಿ ಸೇರಿದಂತೆ ಹಲವು ಚಿತ್ರ ನಿರ್ಮಾಪಕರು ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ.

Leave a Reply

Your email address will not be published. Required fields are marked *