ಚುನಾವಣಾ ಆಯೋಗದಿಂದ ರೈಲ್ವೆ ಹಾಗೂ ವಿಮಾನ ಸಚಿವಾಲಯಕ್ಕೆ 2ನೇ ನೋಟಿಸ್ ! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದ್ದು, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಶುಕ್ರವಾರವಷ್ಟೇ ಅಂದರೆ ಮಾರ್ಚ್ 29 ರಂದು ಮಿಷನ್‌ ಶಕ್ತಿ ಕುರಿತು ಪ್ರಧಾನಿ ಮೋದಿ ಇತ್ತೀಚೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದ ವಿಚಾರವಾಗಿ ಮೋದಿಗೆ ಕ್ಲೀನ್‌ ಚಿಟ್‌ ನೀಡಿದ್ದ ಆಯೋಗ, ಇದು ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದಿತ್ತು. ಆದರೆ ರೈಲ್ವೆ ಟಿಕೆಟ್‌ಗಳಲ್ಲಿ ಹಾಗೂ ಏರ್‌ ಇಂಡಿಯಾ ವಿಮಾನದ ಬೋರ್ಡಿಂಗ್‌ ಪಾಸ್‌ನಲ್ಲಿ ಪ್ರಧಾನಿ ಮೋದಿ ಫೋಟೋ ಕಂಡು ಬಂದ ಹಿನ್ನೆಲೆ ಚುನಾವಣಾ ಆಯೋಗ ​ರೈಲ್ವೆ ಸಚಿವಾಲಯಕ್ಕೆ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಎರಡನೇ ನೋಟಿಸ್‌ ನೀಡಿದೆ.

ರೈಲ್ವೆ ಸಚಿವಾಲಯಕ್ಕೆ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಚುನಾವಣಾ ಆಯೋಗ ಬುಧವಾರದಂದು ಪತ್ರ ಬರೆದಿದ್ದು, ಪ್ರಧಾನಿ ಮೋದಿ ಫೋಟೋ ತೆಗೆಯದಿದ್ದನ್ನು ಪ್ರಶ್ನೆ ಮಾಡಿತ್ತು. ಅಲ್ಲದೆ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಬಳಿಕವೂ ರೈಲು ಟಿಕೆಟ್‌ಗಳಲ್ಲಿ ಹಾಗೂ ಏರ್‌ ಇಂಡಿಯಾ ಬೋರ್ಡಿಂಗ್‌ ಪಾಸ್‌ಗಳಲ್ಲಿ ಪ್ರಧಾನಿ ಮೋದಿ ಫೋಟೋ ಕಂಡು ಬಂದಿರುವುದಕ್ಕೆ ಕೇಂದ್ರ ಚುನಾವಣಾ ಆಯೋಗ ನೋಟಿಸ್‌ ನೀಡಿ 3 ದಿನಗಳೊಳಗಾಗಿ ಉತ್ತರ ನೀಡುವಂತೆ ಚುನಾವಣಾ ಆಯೋಗ ಸೂಚಿಸಿತ್ತು. ಆದರೆ, ಶನಿವಾರ ಸಹ ಪ್ರಧಾನಿ ಮೋದಿ ಫೋಟೋ ಕಂಡು ಬಂದ ಹಿನ್ನೆಲೆ ಎರಡನೇ ಬಾರಿಗೆ ನೋಟಿಸ್ ನೀಡಿದೆ ಎಂದು ತಿಳಿದುಬಂದಿದೆ. ರೈಲ್ವೆ ಟಿಕೆಟ್‌ಗಳಲ್ಲಿ ಮೋದಿ ಫೋಟೋ ಕಂಡು ಬಂದ ಹಿನ್ನೆಲೆ ಚುನಾವಣಾ ಆಯೋಗ ರೈಲ್ವೆ ಸಚಿವಾಲಯಕ್ಕೆ ನೋಟಿಸ್‌ ನೀಡಿದ್ದು, ಇಂದು ಉತ್ತರಿಸುವಂತೆ ಸೂಚಿಸಿದೆ.

Leave a Reply

Your email address will not be published. Required fields are marked *