ರಾಹುಲ್ ಗಾಂಧಿ ಕರ್ನಾಟಕ ಬಿಟ್ಟು ಕೇರಳದಿಂದ ಏಕೆ ಸ್ಪರ್ಧಿಸುತ್ತಿದ್ದಾರೆ? ಪ್ರಧಾನಿ ಮೋದಿ ನೀಡಿದ ಕಾರಣ ನೋಡಿ

ನ್ಯೂಸ್ ಕನ್ನಡ ವರದಿ : ಮೈಸೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮೈತ್ರಿ ಕೂಟ ಸರಕಾರದ ವಿರುದ್ಧ ಮುಗಿಬಿದ್ದರು. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸರಕಾರದಲ್ಲಿ ಮುಖ್ಯಮಂತ್ರಿ ಅವರನ್ನು ಕಾಂಗ್ರೆಸ್‌ ಪಂಚಿಂಗ್‌ ಬ್ಯಾಗ್‌ ಮಾಡಿಕೊಂಡಿದೆ. ಇಲ್ಲಿನ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಿದೆ. ವಂಶಪಾರಂಪರ್ಯದ ರಾಜಕಾರಣ, ಭ್ರಷ್ಟಾಚಾರ ದೇಶದ ಜನರಲ್ಲಿ ಆಕ್ರೋಶ ತಂದಿದೆ,” ಎಂದು ಮೋದಿ ಹೇಳಿದಾಗ ಜನರು “ಮೋದಿ, ಮೋದಿ, ಎಂದು ಕೂಗಿದರು. ಇನ್ನು ಸುಮಾರು 35 ನಿಮಿಷಗಳ ತಮ್ಮ ಭಾಷಣದಲ್ಲಿ ಮೋದಿ, ಮಿತ್ರ ಪಕ್ಷದ ಮೇಲೆ ನಂಬಿಕೆ ಇಲ್ಲದೇ ಇರುವುದರಿಂದ ರಾಹುಲ್ ಕರ್ನಾಟಕದಲ್ಲಿ ಸ್ಪರ್ಧಿಸದೇ ಕೇರಳಕ್ಕೆ ಪಲಾಯನ ಮಾಡಿದ್ದಾರೆ” ಎಂದು ಲೇವಡಿ ಮಾಡಿದರು.

ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಸೋನಿಯಾ ಗಾಂಧಿ ಪಿತೂರಿ ಮಾಡಿದ್ದರು. ಹೀಗಾಗಿ, ಕರ್ನಾಟಕದಲ್ಲಿ ಸ್ಪರ್ಧಿಸಿದರೆ ಜೆಡಿಎಸ್‌ ಸೋಲಿಸುತ್ತದೆ ಎಂಬ ಆತಂಕದಿಂದ ರಾಹುಲ್‌ ಗಾಂಧಿ ಕೇರಳಕ್ಕೆ ಹೋಗಿದ್ದಾರೆ,” ಎಂದು ವ್ಯಂಗ್ಯವಾಡಿದರು. ಇನ್ನು ಕೇರಳದಲ್ಲಿಯೂ ರಾಹುಲ್ ಹವಾ ನಿಯಂತ್ರಿಸಲೆಂದೇ, ರಾಹುಲ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಮೋದಿ, ಜನರ ಭಾವನೆ, ನಂಬಿಕೆಗಳಿಗೆ ಸಂವಿಧಾನದಲ್ಲಿ ರಕ್ಷಣೆ ಸಿಗಬೇಕು ಎಂದ ನರೇಂದ್ರ ಮೋದಿ, “ಕೇರಳದ ಶಬರಿಮಲೆ ದೇವಸ್ಥಾನದಲ್ಲಿಅದರದೇ ಆದ ಸಂಪ್ರದಾಯವಿದೆ. ಅದನ್ನು ನಾವು ಗೌರವಿಸಬೇಕು. ಆದರೆ, ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದ ಸರಕಾರ ಅಯ್ಯಪ್ಪ ಭಕ್ತರ ಮೇಲೆ ಲಾಠಿ ಪ್ರಹಾರ ನಡೆಸಿತು. ಇದನ್ನು ಕಾಂಗ್ರೆಸ್‌ ಸಮರ್ಥಿಸಿಕೊಂಡಿತು,” ಎಂದು ಟೀಕಿಸಿದರು.

Leave a Reply

Your email address will not be published. Required fields are marked *