ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪಿಎಫ್’ಐ ಕಾರ್ಯಕರ್ತನ ಮೃತದೇಹ ಪತ್ತೆ!

ನ್ಯೂಸ್ ಕನ್ನಡ ವರದಿ(24.4.19): ಪ್ರದೇಶವೊಂದರಲ್ಲಿ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹವು ಪತ್ತೆಯಾಗಿದ್ದು, ಮೈಮೇಲಿನ ಗಾಯದ ಕಲೆಗಳನ್ನು ಗಮನಿಸುವಾಗ ಇದೊಂದು ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸಕ್ರಿಯ ಕಾರ್ಯಕರ್ತ ಅಸ್ಲಮ್ (25) ಎಂದು ಮೃತರನ್ನು ಗುರುತಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರ್ ಬಾ ನಗರದಲ್ಲಿ ಘಟನೆಯು ಸಂಭವಿಸಿದೆ. ಬಯಲು ಪ್ರದೇಶವೊಂದರಲ್ಲಿ ಅಸ್ಲಮ್ ಮೃತದೇಹವು ಪತ್ತೆಯಾಗಿದ್ದು, ಪೊಲೀಸರು ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ರವಾನಿಸಿದ್ದು, ಈ ಕುರಿತಾದಂತೆ ಪೊಲೀಸರು ಪ್ರಕರಣ ದಆಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

 

Leave a Reply

Your email address will not be published. Required fields are marked *