ಪಶ್ಚಿಮ ಬಂಗಾಳದಿಂದ ಆಯ್ಕೆಯಾದ ಈ ಯುವ ಸಂಸದೆಯರು ಸಂಸತ್ತನ್ನು ಪ್ರವೇಶಿಸಿದ್ದು ಹೇಗೆ ಗೊತ್ತೇ?

ನ್ಯೂಸ್ ಕನ್ನಡ ವರದಿ: ಕೆಲದಿನಗಳ ಹಿಂದೆಯಷ್ಟೇ ಬಂದ ಲೋಕಸಭಾ ಚುನಾವಣೆ ಫಲಿತಾಂಶವನ್ನು ನೋಡಿದರೆ ಈ ಬಾರಿಯ ಹೆಚ್ಚಾಗಿ ಸಿನಿ ಕಲಾವಿದರು ಗೆಲುವು ಸಾಧಿಸಿದ್ದಾರೆ. ಇದೀಗ ಪಶ್ಚಿಮ ಬಂಗಾಳದಿಂದ ಚುನಾವಣೆಯಲ್ಲಿ ಗೆದ್ದಿರುವ ಇಬ್ಬರು ಯುವ ನಟಿಯರು ಸಂಸತ್ತಿಗೆ ಪ್ರವೇಶಿಸುವ ದಿನವೇ ಸುದ್ದಿಯಲ್ಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ
ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್ ಇಬ್ಬರು ನೂತನ ಸಂಸದೆಯರಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಸಂಸತ್‍ಗೆ ಪ್ರವೇಶಿಸಿದ ಖುಷಿಯಲ್ಲಿದ್ದ ಇವರು ಬೇರೆಯವರಂತೆ ಕುರ್ತಾ, ಸೀರೆ ಹಾಕದೇ ತಮ್ಮ ದೈನಂದಿನ ಶೈಲಿಯ ಉಡುಗೆಯೊಂದಿಗೆ ಸಂಸತ್ ಭವನದ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಂಸದೆಯರಾದ ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್ ಇಬ್ಬರೂ ಸಾಂಪ್ರದಾಯಿಕ ರಾಜಕಾಣಿಗಳಿಗಿಂತ ವಿಭಿನ್ನವಾಗಿ ಜೀನ್ಸ್, ವೈಟ್ ಶರ್ಟ್ ಧರಿಸಿ ಮಿಂಚಿದ್ದಾರೆ. ಹಾಗೆಯೇ ನುಸ್ರತ್ ಜಹಾನ್ ಕೂಡ ಪ್ಯಾಂಟ್ ಮತ್ತು ಟಾಪ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗಳಿಗೆ ‘ನಾವು ಅಧಿಕೃತವಾಗಿ ಸಂಸತ್‍ನಲ್ಲಿ ಸಂಸದೆಯರಾಗಿ ನಮ್ಮ ಹೆಸರನ್ನ ನಮೂಸಿದೆವು’ ಎಂದು ಕ್ಯಾಪ್ಶನ್ ಕೊಟ್ಟು ಅಪ್ಲೋಡ್ ಮಾಡಿದ್ದಾರೆ.

Leave a Reply

Your email address will not be published. Required fields are marked *