ವಿಶ್ವಕಪ್ ಗೆದ್ದರೆ ಶರ್ಟ್ ಬಿಚ್ಚಿ ಓಡುವೆ: ಗಂಗೂಲಿ ಮಾತನ್ನು ಒಪ್ಪಿಕೊಂಡ ವಿರಾಟ್ ಕೊಹ್ಲಿ!

ನ್ಯೂಸ್ ಕನ್ನಡ ವರದಿ(08-04-2018): 2019ರ ವಿಶ್ವಕಪ್ ಗೆದ್ದರೆ ವಿರಾಟ್ ಕೊಹ್ಲಿ ಶರ್ಟ್ ಬಿಚ್ಚಿ ಮೈದಾನದಲ್ಲಿ ಓಡಲಿದ್ದಾರೆ ಎಂಬ ಮಾಜಿ ನಾಯಕ ಸೌರವ್ ಗಂಗೂಲಿ ಮಾತನ್ನು ಒಪ್ಪಿಕೊಂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಗೆದ್ದರೆ ನಾನು ಗಂಗೂಲಿ ಹೇಳಿದಂತೆ ಶರ್ಟ್ ಬಿಚ್ಚಿ ಮೈದಾನದಲ್ಲಿ ಓಡಲಿದ್ದೇನೆ ಎಂದಿದ್ದಾರೆ.

ಅವರು ಹೇಳಿದ ಮಾತು 120% ಖಚಿತ. ನಾನು ಖಂಡಿತವಾಗಿಯೂ ಶರ್ಟ್ ಬಿಚ್ಚಿ ಮೈದಾನದಲ್ಲಿ ಓಡಲಿದ್ದೇನೆ. ಮಾತ್ರವಲ್ಲ ನನ್ನೊಂದಿಗೆ ಹಾರ್ದಿಕ್ ಪಾಂಡ್ಯ, ಬುಮ್ರಾ ಕೂಡ ಶರ್ಟ್ ಬಿಚ್ಚಿ ಓಡಲಿದ್ದಾರೆ. ಇನ್ನಿತರರೂ ನಮ್ಮೊಂದಿಗೆ ಸೇರಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.

2002 ನಾಟ್ ವೆಸ್ಟ್ ಸರಣಿ ಗೆದ್ದ ಬಳಿಕ ಸೌರವ್ ಗಂಗೂಲಿಯವರು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದರೆ ಕೊಹ್ಲಿ ಸಹ ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆಂದು ಗಂಗೂಲಿಯವರು ಈ ಹಿಂದೆ ಹೇಳಿದ್ದರು.

Leave a Reply

Your email address will not be published. Required fields are marked *