ಯಡಿಯುರಪ್ಪನವರನ್ನೇ ಕಾಂಗ್ರೆಸ್ಸಿಗೆ ಆಹ್ವಾನಿಸಿದ ಎಂ ಬಿ ಪಾಟೀಲ್!! ನೀಡಿದ ಆಫರ್ ಏನು ಗೊತ್ತೇ?
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಇದೀಗ ಹೊಸ ಮಟ್ಟಕ್ಕೆ ತಲುಪಿದೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಗೃಹಸಚಿವರಾದ ಎಂ ಬಿ ಪಾಟೀಲರು ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಯಡಿಯುರಪ್ಪಯವರನ್ನೇ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ.
ಯಡಿಯುರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರನ್ನು ಬೇಕಾದರೆ ಮುಖ್ಯಮಂತ್ರಿಯನ್ನಾಗಿಸಲು ಪ್ರಯತ್ನಿಸುವ ಎಂದು ಹೇಳಿ ಬಿಜೆಪಿಯ ಮಾಜಿ ಸಚಿವ ಸಿ.ಟಿ ರವಿಗೆ ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಬಿಎಸ್ ವೈ ಸಿಎಂ ಆಗಲು ಎಂ.ಬಿ.ಪಾಟೀಲ್ ಸಹಕಾರ ನೀಡಲಿ” ಎನ್ನುವ ಸಿ.ಟಿ.ರವಿ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದಾರೆ. ನಾನು ಒಂದು ಪಕ್ಷದಲ್ಲಿದ್ದೇನೆ. ಬಿ.ಎಸ್.ಯಡಿಯೂರಪ್ಪ ಇನ್ನೊಂದು ಪಕ್ಷದಲ್ಲಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬಂದಲ್ಲಿ ಮುಖ್ಯಮಂತ್ರಿಯಾಗಲು ಸಹಾಯ ಮಾಡುವುದಾಗಿ ಎಂ.ಬಿ.ಪಾಟೀಲ್ ಹೇಳಿದರು.