ಸರಕಾರಕ್ಕೆ 10 ರಲ್ಲಿ 7 ಅಂಕ ನೀಡಿದ ಜನತೆ : ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾದ ಸಿದ್ಧರಾಮಯ್ಯ!

ನ್ಯೂಸ್ ಕನ್ನಡ ವರದಿ(08-04-2018): ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ದಕ್ಷ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರಕ್ಕೆ 10 ರಲ್ಲಿ 7 ಅಂಕಗಳನ್ನು ನೀಡುವ ಮೂಲಕ ಮೊದಲ ಶ್ರೇಣಿಯಲ್ಲಿ ತೇರ್ಗಡೆಗೊಳಿಸಿದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 13,224 ಜನರನ್ನು ಸಂದರ್ಶನ ನಡೆಸಿ ಸಮೀಕ್ಷೆಯ ವರದಿಯನ್ನು ತಯಾರಿಸಲಾಗಿದೆ. ಡಿಸೆಂಬರ್ 2017 ರಿಂದ ಫೆಬ್ರವರಿ 2018ರ ತನಕ ಈ ಸಮೀಕ್ಷೆಯನ್ನು ನಡೆಸಲಾಗಿದೆ. ನಗರದ ಪ್ರದೇಶದಲ್ಲಿ 10ಕ್ಕೆ ಕಾಂಗ್ರೆಸ್ 7.13, ಗ್ರಾಮೀಣ ಪ್ರದೇಶದಲ್ಲಿ 7.05ರಷ್ಟು ಅಂಕಗಳನ್ನು ಪಡೆದಿದೆ.ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್, ನೀರಿನ ಸರಬರಾಜು, ಆಹಾರ ಸರಬರಾಬು ವಿಚಾರದಲ್ಲಿ ಸರ್ಕಾರ ಉತ್ತ ಕೆಲಸ ಮಾಡಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. 10 ಅಂಕಗಳಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ 7 ಅಂಕಗಳನ್ನು ನೀಡಿದ್ದಾರೆ.

ಶಿಕ್ಷಣ, ವಿದ್ಯುತ್ ಮತ್ತು ನೀರು ನಿರ್ವಹಣೆ ವಿಚಾರದಲ್ಲಿ ರಾಜ್ಯದ ಜನರು ಸರ್ಕಾರವನ್ನು ಬೆಂಬಲಿಸಿದ್ದಾರೆ. ಶೇ 79ರಷ್ಟು ಜನರು ಸರ್ಕಾರದ ಜನಪ್ರಿಯ ಯೋಜನೆ ಅನ್ನಭಾಗ್ಯ ಯೋಜನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *