ಬೆಂಗಳೂರು: ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹಾದ್ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಆಗಿ ವರ್ಗಾವಣೆ!
ಬೆಂಗಳೂರು: ವೈಟ್ಫೀಲ್ಡ್ ಡಿಸಿಪಿ ಅಬ್ದುಲ್ ಅಹಾದ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಆಗಿ ವರ್ಗಾಯಿಸಲಾಗಿದೆ.
ಬೆಂಗಳೂರು ವೈಟ್ಫೀಲ್ಡ್ ವಿಭಾಗದ ಉಪ ಆಯುಕ್ತ ಅಬ್ದುಲ್ ಅಹಾದ್ ಪುತಿಗೆ ಅವರನ್ನು ಶನಿವಾರ ಬೆಂಗಳೂರು ನಗರದ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಯಿತು.
ಅಬ್ದುಲ್ ಅಹಾದ್ ಅವರನ್ನು ಆಗಸ್ಟ್ 2017 ರಿಂದ ನಗರದ ವೈಟ್ಫೀಲ್ಡ್ ವಿಭಾಗದ ಡಿಸಿಪಿಯಾಗಿ ನೇಮಿಸಲಾಯಿಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರಿಯಿಂದ ಬಂದ ಅಬ್ದುಲ್ ಅಹಾದ್ ಈ ಹಿಂದೆ ಲೋಕಾಯುಕ್ತದಲ್ಲಿ ಡಿ.ಎಸ್.ಪಿ,ಹಾಗೂ ಎಸ್ಪಿ, ಸಿಐಡಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಎಸ್ಪಿ ಮತ್ತು ವೈಟ್ಫೀಲ್ಡ್ನ ಡಿಸಿಪಿಯಾಗಿ ನೇಮಕಗೊಳ್ಳುವ ಮೊದಲು ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೆಚ್ಚುವರಿ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದಾರೆ.