ಜೈಲ್ ಮೇಟ್ ಸಲ್ಮಾನ್ ಖಾನ್ ಕುರಿತು ಪ್ರೀತಿಯ ಮಾತುಗಳನ್ನಾಡಿದ ಆಸಾರಾಮ್ ಬಾಪು!

ನ್ಯೂಸ್ ಕನ್ನಡ ವರದಿ-(08.04.18): ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಆಸಾರಾಮ್ ಬಾಪು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನು ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತನಟ ಸಲ್ಮಾನ್ ಖಾನ್ ಕೂಡಾ ಜೈಲು ಪಾಲಾಗಿದ್ದರು. ಈ ವೇಳೆ ಇವರಿಬ್ಬರೂ ಹತ್ತಿರದ ಸೆಲ್ ಗಳಲ್ಲೇ ಇದ್ದು ಹಲವು ಬಾರಿ ಕುಶಲೋಪರಿ ನಡೆಸಿದ್ದಾರೆ. ನಿನ್ನೆ ತಾನೇ ಸಲ್ಮಾನ್ ಖಾನ್ ಗೆ ಜೋಧ್ ಪುರ ಸೆಶನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಸಲ್ಮಾನ್ ಜೈಲಿನಿಳದ ಹೊರ ಬಂದಿದ್ದಾರೆ. ಇದೀಗ ಜೈಲಿನಲ್ಲಿದ್ದ ಸಲ್ಮಾನ್ ಖಾನ್ ಕುರಿತು ಆಸಾರಾಂ ಬಾಪು ಕೆಲವು ಮಾತುಗಳನ್ನಾಡಿದ್ದಾರೆ.

ಕೇವಲ ಎರಡೇ ದಿನದಲ್ಲಿ ಸಲ್ಮಾನ್ ಹಾಗೂ ಅಸಾರಾಮ್‌ ನಡುವೆ ಸ್ನೇಹ ಬೆಳೆದಿತ್ತು. ಪರಸ್ಪರರಲ್ಲಿ ಹಲವು ವಿಚಾರಗಳ ವಿನಿಮಯವಾಗಿದೆ. ಇದೇ ವೇಳೆ ಅಸಾರಾಮ್‌ ಬಳಿ ಸಲ್ಮಾನ್ ಒಂದು ಪ್ರಮಾಣ ಮಾಡಿದ್ದಾರಂತೆ. ಇನ್ನು ಮುಂದೆ ಸಿಗರೇಟ್ ಸೇದೋಲ್ಲ ಹಾಗೂ ಕಾಫಿ ಕುಡಿಯೋದು ಕಡಿಮೆ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾರಂತೆ ಸಲ್ಮಾನ್‌. ಸಲ್ಮಾನ್ ನಿನ್ನೆ ಜೈಲಿನಿಂದ ಹೊರ ಹೋಗುತ್ತಿದ್ದಂತೆ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ ಅಸಾರಾಮ್‌.

Leave a Reply

Your email address will not be published. Required fields are marked *