IMA ವಂಚಕ ಮನ್ಸೂರ್ ನಿಂದ ₹4.5 ಕೋಟಿ ಲಂಚ ಪಡೆದಿದ್ದ ಅಧಿಕಾರಿಯ ಬಂಧನ! ಯಾರೀತ ಗೊತ್ತೇ?

ನ್ಯೂಸ್ ಕನ್ನಡ ವರದಿ : ಅಧಿಕ ಬಡ್ಡಿಯ ಆಸೆ ತೋರಿಸಿ ಸಾವಿರಾರು ಜನರಿಗೆ ವಂಚನೆ ಮಾಡಿದ ಐಎಂಎ ಪ್ರಕರಣದಲ್ಲಿ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಧಿಕಾರಿ ಎಲ್.ಸಿ ನಾಗರಾಜ್ ಅವರನ್ನು ವಿಶೇಷ ತನಿಖಾ ತಂಡ ( ಎಸ್ ಐಟಿ) ಇಂದು ಬಂಧಿಸಿದೆ. ಕೆಲ ದಿನಗಳ ಹಿಂದೆ ರಹಸ್ಯ ಸ್ಥಳದಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದ ಐಎಂಎ ಸಂಸ್ಥೆಯ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್, ಪ್ರಕರಣ ಮುಚ್ಚಿ ಹಾಕಲು ಅಧಿಕಾರಿಯೊಬ್ಬರು ತನ್ನಿಂದ ಕೋಟ್ಯಾಂತರ ರೂಪಾಯಿ ಲಂಚ ಪಡೆದಿದ್ದರೆಂದು ಹೇಳಿಕೊಂಡಿದ್ದ.

ಇದನ್ನು ಆಧಾರಿಸಿ ಎಸ್ಐಟಿ ಎಲ್.ಸಿ ನಾಗರಾಜ್ ಅವರನ್ನು ಬಂಧಿಸಿದೆ. ಐಎಂಎ ಸಮೂಹ ಕಂಪನಿ’ ನಿಯಮಬಾಹಿರ ವಹಿವಾಟಿನ ಬಗ್ಗೆ ತನಿಖೆ ನಡೆಸುವಂತೆ ಆರ್‌ಬಿಐ ಈ ಹಿಂದೆ ಸೂಚನೆ ನೀಡಿತ್ತು. ಅದರನ್ವಯ ತನಿಖೆ ಜವಾಬ್ದಾರಿಯನ್ನು ನಾಗರಾಜ್ ಅವರಿಗೆ ವಹಿಸಲಾಗಿತ್ತು. ಅವರು ₹4.5 ಕೋಟಿ ಲಂಚ ಪಡೆದು ಐಎಂಎ ಪರವಾಗಿ ವರದಿ ನೀಡಿದ್ದರು ಎಂಬ ಆರೋಪ ಅವರ ಮೇಲಿದೆ. ‘ಕಂಪನಿ ವಹಿವಾಟಿನ ಬಗ್ಗೆ ಮಾಹಿತಿ ಪಡೆಯಲು ಗುರುವಾರವೇ ನಾಗರಾಜ್‌ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಪುರಾವೆಗಳು ಸಿಕ್ಕವು. ಹೀಗಾಗಿಯೇ ಅವರನ್ನು ಬಂಧಿಸಲಾಗಿದೆ. ಸದ್ಯದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯವಿದೆ ಇದೆ. ಕಂಪನಿಯ ತನಿಖೆ ನಡೆಸುವ ನೆಪದಲ್ಲಿ ಮನ್ಸೂರ್​ ಖಾನ್​ನನ್ನು ಭೇಟಿಯಾಗಿದ್ದ ಎಲ್​.ಸಿ. ನಾಗರಾಜ್​, ಐಎಂಎ ಸಂಸ್ಥೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಅವ್ಯವಹಾರ ಮಾಡುತ್ತಿಲ್ಲ ಎಂದು ವರದಿ ನೀಡಲು 4.5 ಕೋಟಿ ರೂ. ಲಂಚ ಪಡೆದುಕೊಂಡಿದ್ದರು.

Leave a Reply

Your email address will not be published. Required fields are marked *