ಭಾರತದ ಗೆಲುವಿಗೆ 265 ರನ್ಗಳ ಸವಾಲು ನೀಡಿತ ಶ್ರೀಲಂಕಾ: ವಿಶ್ವಕಪ್.
ನ್ಯೂಸ್ ಕನ್ನಡ ವರದಿ: ಶ್ರೀಲಂಕಾ ವಿರುದ್ಧ ವಿಶ್ವಕಪ್ನ 44ನೇ ಹಾಗೂ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಗೆಲುವಿಗೆ 265 ರನ್ಗಳ ಗೆಲುವಿನ ಸವಾಲನ್ನು ಪಡೆದಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಅವರ ಆಕರ್ಷಕ ಶತಕದ ನೆರವಿನಲ್ಲಿ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 264ರನ್ ಗಳಿಸಿದೆ.