ಅತೃಪ್ತರ ರಾಜಿನಾಮೆ ಅಂಗೀಕಾರಕ್ಕೆ ಬ್ರೇಕ್ ಹಾಕಿದ ಸ್ಪೀಕರ್ ! ಹೇಳಿದ್ದೇನು ಗೊತ್ತೇ ?

ನ್ಯೂಸ್ ಕನ್ನಡ ವರದಿ : ಶನಿವಾರ ಶಾಸಕ ಸ್ಥಾನಕ್ಕೆ ಸಾಲು ಸಾಲಾಗಿ ರಾಜೀನಾಮೆ ನೀಡಿದ 13 ಜನ ರೆಬೆಲ್​ ನಾಯಕರ ಭವಿಷ್ಯ ಸ್ಪೀಕರ್​ ಮುಂದೆ ಇದ್ದು, ಈ ಕುರಿತು ಮಂಗಳವಾರ ಕಾನೂನಾತ್ಮಕವಾಗಿ ನಾನು ತೀರ್ಮಾನ ಮಾಡುತ್ತೇನೆ ಎಂದಿದ್ದರು. ಅದರಂತೆ ಇಂದು ತಮ್ಮ ಕಚೇರಿಗೆ ಆಗಮಿಸಿರುವ ಅವರು ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಯಾವ ಕ್ರಮಕ್ಕೆ ಮುಂದಾಗಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಅತೃಪ್ತ ಶಾಸಕರ ರಾಜಿನಾಮೆ ಅಂಗಿಕಾರವಾಗುತ್ತೆಯೇ, ಇಲ್ಲವೇ ಎಂಬ ಕುತೂಹಲಕ್ಕೆ ಬ್ರೇಕ್ ಹಾಕಿರುವ ಸ್ಪೀಕರ್ ರಮೇಶ್ ಕುಮಾರ್ ಅವರು, ಖುದ್ದಾಗಿ ರಾಜೀನಾಮೆ ನೀಡಿದ ಬಳಿಕ ಚರ್ಚೆ ನಡೆಸಿ ಅಂಗೀಕಾರ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಕೆಲವು ನಿಯಮಗಳನ್ನು ಹೊಂದಿದ್ದೇನೆ, ಅದರ ಪ್ರಕಾರ ನಾನು ನಡೆದುಕೊಳ್ಳುತ್ತೇನೆ. ಸಂವಿಧಾನದ ಪ್ರಕಾರ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಸ್ಪೀಕರ್ ಕಚೇರಿ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ತುರ್ತಾಗಿ ಯಾವ ಕಾರ್ಯವನ್ನೂ ಮಾಡಲು ಸಾಧ್ಯವಿಲ್ಲ. ನಿಯಮದ ಪ್ರಕಾರ ಶಾಸಕರು ಖುದ್ದಾಗಿ ರಾಜೀನಾಮೆ ಸಲ್ಲಿಸಬೇಕು. ಸಲ್ಲಿಸಿದ ರಾಜೀನಾಮೆಗಳು ಸ್ವಯಂ ಪ್ರೇರಿತ ಮತ್ತು ಸತ್ಯವಾದುವು ಎಂದು ಸ್ಪೀಕರ್ ಗೆ ಮನವರಿಕೆಯಾದರೆ ಮಾತ್ರ ಅವರು ರಾಜೀನಾಮೆ ಅಂಗೀಕರಿಸಬಹುದು. ನೋಡೋಣ ಮುಂದೇನಾಗುತ್ತದೆ” ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *