ಅತೃಪ್ತರಿಗೆ ಬಿಗ್ ಶಾಕ್ ನೀಡಿದ ಸ್ಪೀಕರ್: ಕೇವಲ ಐದು ಶಾಸಕರ ರಾಜೀನಾಮೆ ಕ್ರಮಬದ್ದ!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಿದೆ. ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲಿಸಿದ್ದು, ಇದರಲ್ಲಿ ಐವರ ರಾಜೀನಾಮೆಯಷ್ಟೇ ಕ್ರಮ ಬದ್ಧವಾಗಿದೆ. ಉಳಿದವರ ರಾಜೀನಾಮೆಗಳು ನಮ್ಮ ನಿಯಮದಂತೆ ಇಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 13 ರಾಜೀನಾಮೆಗಳಲ್ಲಿ 5 ಪತ್ರಗಳನ್ನು ಹೊರತುಪಡಿಸಿ ಅಂದ್ರೆ ಆನಂದ್ ಸಿಂಗ್, ನಾರಾಯಣ ಗೌಡ, ಪ್ರತಾಪ್ ಗೌಡ ಪಾಟೀಲ್, ಗೋಪಾಲಯ್ಯ ಹಾಗೂ ರಾಮಲಿಂಗಾ ರೆಡ್ಡಿ ಇವರು ನಮ್ಮ ನಿಯಮಾವಳಿಯಂತೆ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆ. ಉಳಿದ ರಾಜೀನಾಮೆ ಪತ್ರಗಳು ಕ್ರಮಬದ್ಧವಾಗಿಲ್ಲ. ಹೀಗಾಗಿ ಅವರಿಗೆ ನಮ್ಮ ಕಚೇರಿಯಿಂದ ತಿಳುವಳಿಕೆ ಕೊಟ್ಟಿದ್ದೇವೆ ಎಂದರು.

ಇಂದು ರೋಷನ್ ಬೇಗ್ ಅವರು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಸರಿಯಾದ ಕ್ರಮದಲ್ಲಿ ರಾಜೀನಾಮೆ ನೀಡಿರುವ 5 ಮಂದಿಗೆ ಇದೇ ತಿಂಗಳ 12 ರಂದು 3 ಗಂಟೆಗೆ ಆನಂದ್ ಸಿಂಗ್, 4 ಗಂಟೆಗೆ ನಾರಾಯಣ ಗೌಡ ಹಾಗೂ ಪ್ರತಾಪ್ ಗೌಡ ಪಾಟೀಲ್ ಅವರನ್ನು ವೈಯಕ್ತಿಕ ಕಾರಣ ನೀಡಲು ಕರೆದಿದ್ದೇವೆ. 15 ರಂದು ಗೋಪಾಲಯ್ಯ ಮತ್ತು ರಾಮಲಿಂಗಾ ರೆಡ್ಡಿಯನ್ನು ಪರ್ಸನಲ್ ಹೀಯರಿಂಗ್ ಗೆ ಕರೆಸಿದ್ದೇನೆ. ನಾನು ಸಮಯ ವ್ಯರ್ಥ ಮಾಡಲ್ಲ. ಎಲ್ಲವೂ ಪಾರದರ್ಶಕವಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *