ಧೋನಿಯಂತಹ ಕೊಳಕು ಜನರು ಶಾಶ್ವತವಾಗಿ ಉಳಿಯುವುದಿಲ್ಲ !: ಯುವರಾಜ್ ಸಿಂಗ್ ತಂದೆಯಿಂದ ಆಕ್ರೋಶ
ನ್ಯೂಸ್ ಕನ್ನಡ ವರದಿ : ವಿಶ್ವಕಪ್ಗಾಗಿನ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಅಂಬಟಿ ರಾಯುಡು ಇತ್ತೀಚೆಗಷ್ಟೇ ಅನಿರೀಕ್ಷಿತವಾಗಿ ಎಲ್ಲ ಪ್ರಕಾರದ ಕ್ರಿಕೆಟ್ಗೂ ನಿವೃತ್ತಿ ಘೋಷಿಸಿದ್ದರು. ಇದೀಗ ಅಂಬಟಿ ಬೆಂಬಲಕ್ಕೆ ನಿಂತಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಹೀರೊ ಯುವರಾಜ್ ಸಿಂಗ್ ಅವರ ಅಪ್ಪನಾಗಿರುವ ಯೋಗರಾಜ್ ಸಿಂಗ್, ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮನಬಂದಂತೆ ಟೀಕಿಸಿದ್ದಾರೆ.
ರಾಯುಡು ಕ್ರಿಕೆಟ್ನಲ್ಲಿ ಮುಂದುವರಿಯಬೇಕಿತ್ತು. ರಣಜಿ ಟ್ರೋಷಿ, ಇರಾನಿ ಟ್ರೋಫಿ, ದುಲೀಪ್ ಟ್ರೋಫಿ ಆಡಿ ಅಜೇಯ ಶತಕ, ದ್ವಿಶತಕ ಹಾಗೂ ತ್ರಿಶತಕಗಳನ್ನು ಬಾರಿಸಬೇಕಿತ್ತು. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಬಾಕಿ ಉಳಿದಿದೆ. ಯುವ ಆಟಗಾರರಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಹೇಗೆ ಅವಕಾಶ ನೀಡುತ್ತಿದ್ದರು ಎಂಬುದನ್ನು ಉಲ್ಲೇಖಿಸುತ್ತಾ ಯೋಗರಾಜ್, ಧೋನಿಯ ಮೇಲೆ ಟೀಕೆಗಳ ಪ್ರಹಾರ ಮಾಡಿದ್ದು, ಧೋನಿಯಂತಹ ಕೊಳಕು ವ್ಯಕ್ತಿಗಳು ಕ್ರಿಕೆಟ್ನಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ ಎಂದಿದ್ದಾರೆ.