ಸರ್ಕಾರ ಉಳಿಯಲಿ, ಉರುಳಲಿ ಆದ್ರೆ ಡಿಕೆಶಿ ಭಯ ಅಂದ್ರೆ ಹೀಗಿರ್ಬೇಕು!: ಡಿಕೆಶಿಗೆ ಪ್ರಶಂಸೆಯ ಮಹಾಪೂರ
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಮುಂಬೈ ನಲ್ಲಿರುವ ಅತೃಪ್ತ ಶಾಸಕರನ್ನು ಮಾತನಾಡಿಸಿ ಮನವೊಲಿಸಿಕೊಳ್ಳುವ ಉದ್ದೇಶದಿಂದ ಮುಂಬೈ ಹೋಟೆಲ್ ಪ್ರವೇಶಿಸಲು ಯತ್ನಿಸಿದ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೋಲೀಸರು ತಡೆದಾಗ ಸತತ 7 ಗಂಟೆ ಅಲ್ಲೇ ನಿಂತು ಕದಲದೇ ಭೇಟಿಗಾಗಿ ಪಣತೊಟ್ಟು ಕೊನೆಗೆ ಬಂಧನಕ್ಕೆ ಒಳಗಾದ ಡಿಕೆಶಿವಕುಮಾರ್ ಬಗ್ಗೆ ರಾಜ್ಯದ ಕಾಂಗ್ರೆಸ್ ಬೆಂಬಲಿಗರು ಪ್ರಶಂಸೆಯ ಮಹಾಪೂರ ಹರಿಸಿದ್ದಾರೆ.
ನಾನು ಒಬ್ಬನೇ ಬಂದ್ದಿದ್ದೇನೆ, ಒಬ್ಬನೇ ನಿಂತು ಹೋರಾಡುವೆ, ನಾನು ಗನ್ ತಂದಿಲ್ಲ, ಹೃದಯ ಮಾತ್ರ ತಂದಿದ್ದೇನೆ ಎಂದ ಡೈಲಾಗ್ ಗಳು, ಮಳೆ ಬರಲಿ ,ನಾನು ಬಿದ್ದು ಹೋದರೂ , ಜಪ್ಪಯ್ಯ ಅಂದರೂ ನಾನು ಇಲ್ಲಿಂದ ಕದಲಲ್ಲ ಎಂದು ಗರ್ಜಿಸಿದ ಡಿಕೆ ಶಿವಕುಮಾರ್ ಅಲ್ಲೇ ಹೋಟೆಲ್ ಎದುರೇ ನಿಂತು ಬೆಳಗಿನ ಉಪಹಾರವನ್ನೂ ಸೇವಿಸಿ, ಕುರ್ಚಿಯಲ್ಲಿ ಕೂತು ಸತತ ಏಳು ಗಂಟೆ ನಿಂತಿದ್ದರು.
ಸಾವಿರಾರು ಮಹಾರಾಷ್ಟ್ರ ಬಿಜೆಪಿ ಬೆಂಬಲಿತ ಕಾರ್ಯಕರ್ತರ ಘೋಷಣೆಗಳು, ಬಿಜೆಪಿ ಬೆಂಬಲಿತ ನಾಯಕರು, ಬಿಜೆಪಿ ನಾಯಕರ ಆದೇಶ ಪಾಲನೆ ಮಾಡುವ ಪೋಲೀಸರು, ಒತ್ತಡ ಹಾಕುವ ಮಾಧ್ಯಮಗಳು ಇವೆಲ್ಲದರ ನಡುವೆ ಒಬ್ಬನೇ ಒಬ್ಬ ಡಿಕೆಶಿಗೆ ಹೆದರಿದ ಬಿಜೆಪಿ ಹಾಗೂ ಅತೃಪ್ತ ಶಾಸಕರು, ಇದೇ ಡಿಕೆಶಿ ಪವರ್ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಪರವಾದ ಪೋಸ್ಟ್, ಬೆಂಬಲಿತ ಕಮೆಂಟ್ ಹರಿದಾಡಿದವು.