ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್! ವಿಪಕ್ಷ ನಾಯಕನೂ ಸೇರಿ 10 ಶಾಸಕರು ಬಿಜೆಪಿಗೆ ಜಂಪ್!
ನ್ಯೂಸ್ ಕನ್ನಡ ವರದಿ: ಇತ್ತ ರಾಜ್ಯದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಆಪರೇಷನ್ ಕಮಲ ನಡೆಸಿ ಸಾಲುಸಾಲಾಗಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಾ ಸರಕಾರ ಅಸ್ಥಿರ ಗೊಳಿಸಲು ಪ್ರಯತ್ನ ನಡೆಸುತ್ತಾ ದೇಶದಾಂತ್ಯ ಚರ್ಚೆಯಲ್ಲಿರುವಾಗ ಅತ್ತ ಮತ್ತೊಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ.
ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಶಾಸಕರ ಸಂಖ್ಯೆ 17, ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯೆ 15. ಆದರೆ ನಿನ್ನೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ನ 10 ಶಾಸಕರು ಅಂದರೆ 2/3ರಷ್ಟು ಶಾಸಕರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಲು ಮುಂದಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ವಿರೋಧ ಪಕ್ಷದ ನಾಯಕನೂ ಸೇರಿದಂತೆ 10ಜನ ಶಾಸಕರು ನಿನ್ನೆ ಪಕ್ಷ ನಿಷ್ಠೆ ಬದಲಾಯಿಸಿದ್ದು, ಈ ಕುರಿತು ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ “ವಿರೋಧ ಪಕ್ಷದ ನಾಯಕರ ಜೊತೆ 10 ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ವಿಲೀನಗೊಂಡಿದ್ದಾರೆ. ಈಗ ಬಿಜೆಪಿಯ ಬಲ 27ಕ್ಕೇರಿದೆ” ಎಂದು ಹೇಳಿದ್ದಾರೆ.
ಇದರೊಂದಿಗೆ ಬಿಜೆಪಿಗೆ ಗೋವಾದಲ್ಲಿ ಆನೆಬಲ ಬಂದಂತಾಗಿದ್ದು, ಕಾಂಗ್ರೆಸ್ ಶಾಸಕರ ಸಂಖ್ಯೆ ಕೇವಲ ಐದಕ್ಕೆ ಸೀಮಿತವಾಗಿದೆ. ಕುತೂಹಲಕ್ಕೆ ಎಡೆಮಾಡಿದ ಅಂಶವೇನೆಂದರೆ ತಾವು ಏಕೆ ರಾಜೀನಾಮೆ ನೀಡುತ್ತಿದ್ದೀರಿ ಎಂದು ಕೇಳಿದಾಗ ಯಾವುದೇ ಒಬ್ಬ ಶಾಸಕನೂ ಏನೂ ಕಾರಣ ನೀಡಲಿಲ್ಲ, ನಗುತ್ತಾ ಸುಮ್ಮನಾದರು ಎನ್ನಲಾಗಿದೆ.