ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ತಂಡದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಕೋಟ್ಯಾಂತರ ಭಾರತೀಯ ಕ್ರೀಡಾ ಅಭಿಮಾನಿಗಳು ಕಾತುರದಿಂದ ನಿರೀಕ್ಷೆ ಇಟ್ಟಿದ್ದ ಕನಸು ನಿನ್ನೆ ನುಚ್ಚುನೂರಾಗಿದ್ದು, ಐಸಿಸಿ ವಿಶ್ವಕಪ್ ಟೂರ್ನಿಯಿಂದ ಭಾರತ ಹೊರ ಬಿದ್ದಿದೆ. ನ್ಯೂಜಿಲೆಂಡ್​ ವಿರುದ್ಧ 18 ರನ್​ಗಳಿಂದ ಪರಾಭವಗೊಳ್ಳುವ ಮೂಲಕ ಟೀಂ ಇಂಡಿಯಾ ವರ್ಲ್ಡ್​ಕಪ್​ ಅಭಿಯಾನವನ್ನು ಮುಗಿಸಿದೆ. ಇನ್ನು ಈ ಸೋಲಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬೇಸರ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.

‘ನಿಜವಾಗಿಯೂ ಇದು ನಿರಾಶಾದಾಯಕ ಫಲಿತಾಂಶ. ಆದರೂ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋದ ಟೀಂ ಇಂಡಿಯಾದ ಹೋರಾಟದ ಮನೋಭಾವವನ್ನು ಮೆಚ್ಚಲೇಬೇಕು. ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಬ್ಯಾಟಿಂಗ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ ವಿಭಾಗದಲ್ಲಿ ತೋರಿದ ನಿರ್ವಹಣೆ ಬಗ್ಗೆ ಹೆಮ್ಮೆಯಿದ್ದು, ಸೋಲು-ಗೆಲುವು ಜೀವನದ ಒಂದು ಭಾಗ. ಟೀಂ ಇಂಡಿಯಾದ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ’ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದು, ಇಂದು ಕೋಟ್ಯಾಂತರ ಹೃದಯಗಳು ಒಡೆದು ಹೋದವು. ಆದರೂ ನೀವು ಕೊನೆವರೆಗೂ ಹೋರಾಡುವ ಮೂಲಕ ನಮ್ಮ ಪ್ರೀತಿ ಮತ್ತು ಗೌರವಕ್ಕೆ  ಅರ್ಹರಾಗಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *