ಕುಮಾರಸ್ವಾಮಿಗೆ ಇನ್ನು ಅಪ್ಪನ ಮನೆಯೇ ಗತಿ ಎಂದು ಲೇವಡಿ ಬಿಜೆಪಿ ನಾಯಕ ಮಾಡಿದ ಈಶ್ವರಪ್ಪ!

ನ್ಯೂಸ್ ಕನ್ನಡ ವರದಿ: ದೇವೇಗೌಡರ ಮನೆಗೆ ಕುಮಾರಸ್ವಾಮಿ ಹೋಗೋದು ವಿಶೇಷ ಏನಲ್ಲ. ಅಪ್ಪನ ಮನೆಗೆ ಮಗ ಹೋಗೋದು ಸಹಜ. ಇನ್ಮೇಲೆ ಅಪ್ಪನ ಮನೆಯಲ್ಲೇ ಕುಮಾರಸ್ವಾಮಿ ಇರ್ತಾರೆ ಎಂದು ಸಿಎಂ ವಿರುದ್ದ ಬಿಜೆಪಿ ಶಾಸಕ ಕೆಎಸ್​ ಈಶ್ವರಪ್ಪ ಲೇವಡಿ ಮಾಡಿದರು.

ನಿನ್ನೆ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟ ಬೆನ್ನಲ್ಲೇ ಕುಮಾರಸ್ವಾಮಿ ಅವರು ತಮ್ಮ ಗೃಹ ಕಚೇರಿಯಿಂದ ನಿರ್ಗಮಿಸಿ ದೇವೇಗೌಡರ ಮನೆಗೆ ಹೋಗಿದ್ದರು. ಈ ಬಗ್ಗೆ ಈಶ್ವರಪ್ಪ ಅವರು ಕುಮಾರಸ್ವಾಮಿಯ ಕಾಲೆಳೆದರು.

ಇದು ಮುಳುಗುತ್ತಿರುವ ಹಡಗು. ಹೋಗುವ ಮುನ್ನ ಎಷ್ಟು ಸಾಧ್ಯವೋ ಅಷ್ಟು ದೋಚಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ದೋಚಿದ್ದನ್ನು ಬಯಲು ಮಾಡ್ತೇವೆ ಎಂದ ಅವರು, ನಾನು ಮೊದಲೆ ಹೇಳಿದ್ದೆ, ಈ ಅಧಿವೇಶನ ನಡೆಯಲ್ಲ ಅಂತ. ಆದರೂ ಸಿಎಂ ಕುಮಾರಸ್ವಾಮಿ ಅವರು ಇನ್ನೂ ರಾಜೀನಾಮೆ ಕೊಡದೆ ಮುಂದುವರಿಯುತ್ತಿದ್ದಾರೆ. ಈಗಾಗಲೇ ಅಪಮಾನದ ಮೇಲೆ ಅಪಮಾನಕ್ಕೆ ಒಳಗಾಗಿರುವ ಅವರು ಮತ್ತಷ್ಟು ಅಪಮಾನಕ್ಕೆ ಒಳಗಾಗಿ ನಿರ್ಗಮಿಸುತ್ತಾರೆ ಎಂದು ಈಶ್ವರಪ್ಪ ಎಚ್ಚರಿಸಿದರು. ಆರುವ ಮೊದಲು ದೀಪ ಪ್ರಕಾಶಮಾನವಾಗಿ ಉರಿಯುತ್ತದೆ. ಹಾಗೆ ಹೋಗುವ ಮೊದಲು ಕುಮಾರಸ್ವಾಮಿ ವರ್ಗಾವಣೆ ಮತ್ತು ಕಮೀಷನ್ ಲೂಟಿಗೆ ಕೂತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಲೂಟಿ ಮಾಡಿಕೊಂಡು ಹೋಗುತ್ತಾರೆ ಎಂದರು.

Leave a Reply

Your email address will not be published. Required fields are marked *