ಶುಲ್ಕ ಪಾವತಿಸದ ಮಕ್ಕಳನ್ನು ಶಾಲೆಯಿಂದ ಹೊರಹಾಕುವಂತಿಲ್ಲ: ಅಬುಧಾಬಿ ಶಿಕ್ಷಣ ಮಂಡಳಿ

ನ್ಯೂಸ್ ಕನ್ನಡ ವರದಿ(08-04-2018): ಒಂದು ವೇಳೆ ಮಕ್ಕಳ ಪೋಷಕರು ಶಾಲಾ ಶುಲ್ಕ ಪಾವತಿಸದಿದ್ದರೆ ಅಥವಾ ಪಾವತಿಸುವಲ್ಲಿ ವಿಳಂಬವಾದಲ್ಲಿ, ಶಾಲೆಯಿಂದ ಮಕ್ಕಳನ್ನು ಹೊರಹಾಕುವಂತಿಲ್ಲ ಎಂದು ಅಬುಧಾಬಿ ಶಿಕ್ಷಣ ಮಂಡಳಿಯು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆಯನ್ನು ನೀಡಿದೆ.

ಅಬುಧಾಬಿಯ ಖಾಸಗಿ ಶಾಲೆಗಳು ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಹೊರಹಾಕಿದ ಸುದ್ಧಿಯು ಸಾಮಾಜಿಕ ತಾಣಗಳಲ್ಲಿ ವೈರಲಾದ ನಂತರ ಅಬುಧಾಬಿ ಶಿಕ್ಷಣ ಮಂಡಳಿಯು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಮೂರು ಬಾರಿ ಎಚ್ಚರಿಕೆ ನೀಡಿದ ನಂತರವೇ ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಸಸ್ಪೆಂಡ್ ಮಾಡಬಹುದಾಗಿದ್ದು, ಪ್ರತೀ ಎಚ್ಚರಿಕೆಯ ನಡುವೆ ಒಂದು ವಾರದ ಸಮಯವಕಾಶ ಇರತಕ್ಕದ್ದು. ಮೂರು ಬಾರಿ ಎಚ್ಚರಿಕೆಯನ್ನು ನೀಡಿದ ನಂತರವೂ ಪೋಷಕರು ಸ್ಪಂದಿಸದಿದ್ದಲ್ಲಿ ಮಾತ್ರ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡುವ ಅಧಿಕಾರ ಶಾಲೆಗಳಿಗೆ ಇದೆ ಎಂದು ಶಿಕ್ಷಣ ಮಂಡಳಿಯು ತಿಳಿಸಿದೆ.

Leave a Reply

Your email address will not be published. Required fields are marked *