ಭಾರತ ತಂಡದಿಂದ ವಿಶ್ವಕಪ್ ಕಸಿದುಕೊಂಡ ಆ ಒಂದು ಶಾಕಿಂಗ್ ರನ್ಔಟ್! ವೀಡಿಯೋ ವೀಕ್ಷಿಸಿ
ನ್ಯೂಸ್ ಕನ್ನಡ ವರದಿ: ವಿಶ್ವಕಪ್ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಾಣುವ ಮೂಲಕ ಟೀಂ ಇಂಡಿಯಾ ಟೂರ್ನಿಯಿಂದ ಹೊರ ಬಿದ್ದಿದೆ. ಕೇನ್ ವಿಲಿಯಮ್ಸನ್ ಪಡೆ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತುವಲ್ಲಿ ಎಡವಿದ ಭಾರತೀಯ ಬ್ಯಾಟ್ಸ್ಮನ್ಗಳು 18 ರನ್ಗಳಿಂದ ಸೋಲೊಪ್ಪಿಕೊಂಡರು.
ಒಂದು ಹಂತದಲ್ಲಿ ಕಿವೀಸ್ ಕೈಯಲ್ಲಿದ್ದ ಪಂದ್ಯವನ್ನು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜ ಭಾರತದ ಕಡೆ ವಾಲುವಂತೆ ಮಾಡಿದ್ದರು. ಅದರಲ್ಲೂ ನಿರ್ಣಾಯಕ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಈ ಜೋಡಿ 7ನೇ ವಿಕೆಟ್ಗೆ 116 ರನ್ಗಳ ಜೊತೆಯಾಟ ಆಡಿದ್ದರು.
ಭಾರತದ ಗೆಲುವಿಗೆ ಮೂರು ಓವರುಗಳಲ್ಲಿ 32 ರನ್ಗಳ ಅವಶ್ಯಕತೆ ಇದ್ದಾಗ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಜಡೇಜ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಇರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗೆಲುವಿನ ನಿರೀಕ್ಷೆಯನ್ನು ಕಾಯ್ದಿರಿಸಿತ್ತು. ಈ ನಿರೀಕ್ಷೆ ಹುಸಿಯಾಗಲ್ಲ ಎಂಬಂತೆ 48ನೇ ಓವರ್ನ ಮೊದಲ ಎಸೆತವನ್ನು ಧೋನಿ ಸಿಕ್ಸರ್ಗೆ ಅಟ್ಟಿದರು.
ಈ ಹಂತದಲ್ಲಿ ಭಾರತಕ್ಕೆ ಗೆಲ್ಲಲು ಬೇಕಾಗಿದ್ದದ್ದು 10 ಎಸೆತಗಳಲ್ಲಿ 25 ರನ್ಗಳು. ಒಂದೆಡೆ ಧೋನಿ ಮತ್ತೊಂದೆಡೆ ಭುವನೇಶ್ವರ್ ಕುಮಾರ್. ಬೌಲಿಂಗ್ನಲ್ಲಿ ಎಸೆಯುತ್ತಿದ್ದದ್ದು ನ್ಯೂಜಿಲೆಂಡ್ ಪರ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೂಕಿ ಫೆರ್ಗುಸನ್. ಹೀಗಾಗಿ ಭುವಿಗೆ ಸ್ಟ್ರೈಕ್ ನೀಡದೇ ಉಳಿದ ಎಸೆತಗಳನ್ನು ಧೋನಿ ನಿರ್ಧರಿಸಿದ್ದರು. ಅದರಂತೆ ಲೆಗ್ ಸೈಡ್ನಲ್ಲಿ ಬಾರಿಸಿದ ಧೋನಿ ಎರಡು ರನ್ಗಳ ಓಟಕ್ಕೆ ಮುಂದಾಗಿದ್ದರು. ಆದರೆ ಬೌಂಡರಿ ಲೈನ್ನಿಂದ ಓಡಿ ಬಂದ ಮಾರ್ಟಿನ್ ಗಪ್ಟಿಲ್ ಎಲ್ಲರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ್ದರು.
WHAT A MOMENT OF BRILLIANCE!
Martin Guptill was 🔛🎯 to run out MS Dhoni and help send New Zealand to their second consecutive @cricketworldcup final! #CWC19 pic.twitter.com/i84pTIrYbk
— ICC (@ICC) July 10, 2019
ಗಪ್ಟಿಲ್ ಎಸೆದ ಚೆಂಡು ನೇರವಾಗಿ ವಿಕೆಟ್ಗೆ ಬಡಿಯಿತು. ಮಹೇಂದ್ರ ಸಿಂಗ್ ಧೋನಿ ರನೌಟ್ಗೆ ಬಲಿಯಾದರು. ಈ ಒಂದು ರನೌಟ್ನೊಂದಿಗೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ವಿಶ್ವಕಪ್ ಕನಸು ಕಮರಿ ಹೋಯಿತು.