ರಾಜ್ಯದ ಜನರಲ್ಲಿ ಹಾಗೂ ನಾಯಕರಲ್ಲಿ ಕ್ಷಮೆ ಕೋರಿದ ರಮೇಶ್ ಜಾರಕಿಹೊಳಿ ! ಹೇಳಿದ್ದೇನು ಗೊತ್ತೇ ?

ನ್ಯೂಸ್ ಕನ್ನಡ ವರದಿ : ಕ್ರಮಬದ್ಧವಾದ ರಾಜೀನಾಮೆಗಳನ್ನು ಕೂಡಾ ಸ್ಪೀಕರ್ ರಮೇಶ್ ಕುಮಾರ್ ಅವರು ಅಂಗೀಕರಿಸಿಲ್ಲ, ಉಳಿದ ರಾಜೀನಾಮೆಗಳನ್ನು ತಿರಸ್ಕರಿಸಲು ಸೂಕ್ತ ಕಾರಣ ಕೂಡಾ ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ರಮೇಶ್ ಕುಮಾರ್ ವಿರುದ್ಧ ಅತೃಪ್ತ ಶಾಸಕರು, ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ರೆಬೆಲ್ ಶಾಸಕರಿಗೆ ಸುಪ್ರೀಂಕೋರ್ಟ್ ನ್ಯಾಯಪೀಠವು, ಸ್ಪೀಕರ್ ರಮೇಶ್ ಕುಮಾರ್ ಮುಂದೆ ಖುದ್ದು ಹಾಜರಾಗುವಂತೆ ಮಹತ್ವದ ಆದೇಶವನ್ನು ನೀಡಿತ್ತು.

ಸುಪ್ರೀಂ ನಿರ್ದೇಶನದ ಪ್ರಕಾರ ಬೆಂಗಳೂರಿಗೆ ತೆರಳುವ ಮುನ್ನ ಮುಂಬೈನಲ್ಲಿ ಸುದ್ದಿಗಾರರ ಜೊತೆ ಕೊಂಚ ವಿಷಾದದಿಂದಲೇ ಮಾತನಾಡಿದ ರಮೇಶ್ ಜಾರಕಿಹೊಳಿ ಕಳೆದ 8-10 ತಿಂಗಳಿಂದ ಹಾಗೂ ಕಳೆದ ಒಂದು ವಾರದಿಂದ ನಡೆದ ರಾಜಕೀಯ ಘಟನೆಗಳಿಂದ ತಲೆತಗ್ಗಿಸುವಂತಾಗಿದೆ. ಇದಕ್ಕಾಗಿ ನಾನು ರಾಜ್ಯದ ಜನರಲ್ಲಿ ಹಾಗೂ ನಾಯಕರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಡಿ.ಕೆ.ಶಿವಕುಮಾರ್‌ ನನ್ನ ಸ್ನೇಹಿತನೇ ಅಲ್ಲ ಎಂದು ಬುಧವಾರವಷ್ಟೇ ಹರಿಹಾಯ್ದಿದ್ದ ರಮೇಶ್‌ ಜಾರಕಿಹೊಳಿ, ಗುರುವಾರ ಮಾತ್ರ ನನ್ನ ಮಿತ್ರನಾಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಯಾವುದೋ ಕೆಟ್ಟಗಳಿಗೆಯಲ್ಲಿ ಸ್ನೇಹ ಕಳೆದುಕೊಂಡು ಬೇರೆಯಾಗಿದ್ದೇವೆ. ಬುಧವಾರ ಇಡೀ ದಿನ ಶಾಸಕರನ್ನು ಮನವೊಲಿಸಲು ಆಗಮಿಸಿದ್ದ ಅವರು ಅನುಭವಿಸಿದ ಸ್ಥಿತಿ ನೋಡಿ ಬೇಜಾರಾಯಿತು.

ಇನ್ನು ರಾಜ್ಯದಲ್ಲಿ ಕಳೆದ 8-10 ತಿಂಗಳಿಂದ ಹಾಗೂ ವಿಶೇಷವಾಗಿ ಕಳೆದ ಒಂದು ವಾರದಿಂದ ನಡೆದ ರಾಜಕೀಯ ಘಟನೆಗಳಿಂದ ತಲೆತಗ್ಗಿಸುವಂತಾಗಿದೆ. ನನಗೆ ಬಂದ ಸ್ಥಿತಿ ನನ್ನ ವೈರಿಗೂ ಬರುವುದು ಬೇಡ. ಇದಕ್ಕಾಗಿ ನಾನು ರಾಜ್ಯದ ಜನರ ಹಾಗೂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಲ್ಲೂ ಕ್ಷಮೆ ಯಾಚಿಸುತ್ತೇನೆ ಎಂದು ಕ್ಷಮೆ ಯಾಚಿಸಿದರು.

Leave a Reply

Your email address will not be published. Required fields are marked *