ನಾನು ವಿಶ್ವಾಸಮತಯಾಚನೆಗೆ ಸಿದ್ಧ: ಸದನದಲ್ಲಿ ಘೋಷಿಸಿದ ಕುಮಾರಸ್ವಾಮಿ! ಬಿಜೆಪಿಗೆ ಶಾಕ್!!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳ ಸಂಬಂಧಿಸಿದಂತೆ ಕ್ಷಣಕ್ಷಣಕ್ಕೂ ಹೊಸ ತಿರುವು ಕಂಡುಬರುತ್ತಿದ್ದು.

ರಾಜ್ಯ ಸರಕಾರವನ್ನು, ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಲು ಅತೃಪ್ತ ಶಾಸಕರು ತಯಾರಾಗಿ, ರಾಜೀನಾಮೆ ನೀಡಿ ತಮ್ಮದೇ ಮೇಲುಗೈ ಆಗಿದೆ ಅನ್ನೋ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಾವಾಗಿಯೇ ಸದನದಲ್ಲಿ ವಿಶ್ವಾಸಮತಯಾಚನೆ ಮಾಡಿ ಬಹುಮತ ಸಾಧಿಸಲು ಸಿದ್ದನಾಗಿದ್ದೇನೆ ಎಂದು ಹೇಳಿ ಬಿಜೆಪಿಗೆ ಶಾಕ್ ನೀಡಿದ್ದಾರೆ.

ಈ ಮೂಲಕ ಬಿಜೆಪಿ ಸದನದಲ್ಲಿ ಅವಿಶ್ವಾಸಮತಯಾಚನೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಲು ಯೋಚನೆ ಮಾಡಲು ತಯಾರಾಗುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಈ ನಡೆ ಬಿಜೆಪಿಗೆ ತಬ್ಬಿಬ್ಬಾಗಿಸಿದೆ.

Leave a Reply

Your email address will not be published. Required fields are marked *