ತಮಿಳುನಾಡಿನಲ್ಲಿ ಐಪಿಎಲ್ ನಡೆಸಲು ಇದು ಸಕಾಲವಲ್ಲ: ರಜನೀಕಾಂತ್

ನ್ಯೂಸ್ ಕನ್ನಡ ವರದಿ-(08.04.18): ತಿಂಗಳ ಹಿಂದೆ ಕಾವೇರಿ ನದಿಯ ಕುರಿತಾದಂತೆ ಸುಪ್ರೀಮ್ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ಬಹುತೇಕ ಕರ್ನಾಟಕದ ಪರವಾಗಿದ್ದು, ಇದರಿಂದ ನಮಗೆ ನ್ಯಾಯವಾಗಿದೆ ಎಂದು ತಮಿಳುನಾಡಿನ ರೈತರು ಪ್ರತಿಭಟನೆ ಪ್ರಾರಂಬಿಸಿದ್ದರು. ಅಲ್ಲದೇ ಇದೀಗ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಸ್ಥಾಪಿಸಬೇಕೆಂಬ ಬೇಡಿಯನ್ನಿಟ್ಟುಕೊಂಡು ತಮಿಳುನಾಡು ರಾಜ್ಯಾದ್ಯಂತ ಪ್ರತಿಭಟನೆಗಲು ನಡೆಯುತ್ತಿವೆ. ಇದಕ್ಕೆ ರಾಜಕೀಯ ಪಕ್ಷಗಳು ಮಾತ್ರವಲ್ಲದೇ ತಮಿಳುನಾಡಿನ ಸಿನಿಮಾ ನಟರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ ಮಾತ್ರವಲ್ಲದೇ ಪ್ರತಿಭಟನೆಯಲ್ಲೂ ಭಾಗಿಯಾಗಿದ್ದಾರೆ. ಇಂದು ನಡೆದ ಪ್ರತಿಭಟನೆಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಕಮಲ್ ಹಾಸನ್ ಭಾಗವಹಿಸಿದ್ದರು,

ಈ ಸಂದರ್ಭದಲ್ಲಿ ಮಾತನಾಡಿದ ರಜನಿಕಾಂತ್, ತಮಿಳುನಾಡಿನ ರೈತರು ನೀರಿಲ್ಲದೇ ಕಷ್ಟಪಡುತ್ತಿದ್ದಾರೆ. ಕಾವೇರಿ ನೀರಿನ ಕುರಿತಾದಂತೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಈ ನಡುವೆ ತಮಿಳುನಾಡಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಡೆಸಲು ಮುಂದಾಗಿದ್ದಾರೆ. ಆದರೆ ಇದು ಐಪಿಎಲ್ ಗೆ ಸಕಾಲವಲ್ಲ. ಒಂದು ವೇಳೆ ನಿಮಗೆ ವೇಳಾಪಟ್ಟಿಯ ಗೊಂದಲಗಳಾಗುವುದಾದರೆ ಅಥವಾ ಕೊನೆಯ ಕ್ಷಣಗಳಲ್ಲಿ ಬದಲಾವಣೆ ಮಾಡಲು ಕಷ್ಟವಾಗುವುದಾದರೆ ಆಟಗಾರರು ಕಪ್ಪುಪಟ್ಟಿಯನ್ನು ಧರಿಸಿಕೊಂಡು ಆಡಲಿ, ರೈತರ ಪ್ರತಿಭಟನೆಗಳು ಗಮನಸೆಳೆಯಲಿ ಎಂದು ಹೇಳಿದ್ದಾರೆ. ಕಮಲ್ ಹಾಸನ್ ಕೂಡಾ ಈ ಮಾತಿಗೆ ದನಿಗೂಡಿಸಿದ್ದಾರೆ.

Leave a Reply

Your email address will not be published. Required fields are marked *