ಮಹೇಂದ್ರ ಧೋನಿಗೆ ಅಚ್ಚರಿಯ ಟ್ವೀಟ್ ಮಾಡಿ ಲತಾ ಮಂಗೇಶ್ಕರ್ ಹೇಳಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಆಡುವ ಕೊನೆಯ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿಗೆ ಪುಷ್ಠಿ ನೀಡುವಂತೆ ಬಿಸಿಸಿಐ ಅಧಿಕಾರಿಯೊಬ್ಬರು ವರ್ಲ್ಡ್​ಕಪ್ ಬಳಿಕ ಧೋನಿ ವಿದಾಯ ಹೇಳಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು.

ಇದೀಗ ಮಹೀ ಯಾವುದೇ ಕ್ಷಣದಲ್ಲೂ ನಿವೃತ್ತಿಯನ್ನು ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ಗಾನಕೋಗಿಲೆ ಲತಾ ಮಂಗೇಶ್ಕರ್, ನಿವೃತ್ತಿ ಘೋಷಿಸದಂತೆ ಮಹೇಂದ್ರ ಸಿಂಗ್ ಧೋನಿಗೆ ಸಲಹೆ ನೀಡಿದ್ದಾರೆ.

ನಮಸ್ಕಾರ ಎಂ ಎಸ್​ ಧೋನಿ. ನೀವು ಇತ್ತೀಚೆಗೆ ಕ್ರಿಕೆಟ್​​ನಿಂದ ನಿವೃತ್ತಿಯಾಗಲು ಬಯಸಿದ್ದೀರಿ ಎಂದು ಕೇಳಲ್ಪಟ್ಟೆ. ದಯವಿಟ್ಟು ನೀವು ಆ ರೀತಿ ಯೋಚನೆ ಮಾಡಬೇಡಿ. ದೇಶಕ್ಕೆ ನಿಮ್ಮ ಆಟದ ಅವಶ್ಯಕತೆ ಇದೆ. ನೀವು ನಿವೃತ್ತಿ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು ಎಂದು ವಿನಂತಿಸಿಕೊಳ್ಳುತ್ತೇನೆ ಅಂತ ಗಾನಕೋಗಿಲೆ ಟ್ವೀಟ್ ಮಾಡಿದ್ದಾರೆ.

 


ಈ ಮೂಲಕ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ನಿವೃತ್ತಿಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿದಾಯ ಹೇಳುವ ಸಂದರ್ಭದಲ್ಲೂ ಲತಾ ಮಂಗೇಶ್ಕರ್ ಮತ್ತಷ್ಟು ವರ್ಷ ಕ್ರಿಕೆಟ್​ ಆಡುವಂತೆ ಮಾಸ್ಟರ್​ ಬ್ಲಾಸ್ಟರ್​ಗೆ ತಿಳಿಸಿದ್ದರು.

Leave a Reply

Your email address will not be published. Required fields are marked *