ರೆಬೆಲ್ ಶಾಸಕ ಎಂಟಿಬಿ ಜೊತೆ ಡಿಕೆಶಿ ಯಶಸ್ವಿ ಸಂಧಾನ? ಇಲ್ಲಿದೆ ಸಂಪೂರ್ಣ ಡಿಟೇಲ್ಸ್

ನ್ಯೂಸ್ ಕನ್ನಡ ವರದಿ:   ಮೈತ್ರಿ ಸರ್ಕಾರಕ್ಕೆ ತಲೆನೋವಾಗಿರುವ ಅತೃಪ್ತ ಶಾಸಕರ ಮನವೊಲಿಕೆಗೆ ಸಚಿವ ಡಿಕೆ ಶಿವಕುಮಾರ್​ ಮುಂದಾಗಿದ್ದಾರೆ. ಒನ್​ ಮ್ಯಾನ್​ ಆರ್ಮಿಯಾಗಿ ಅವರು ರೆಬೆಲ್​ ಶಾಸಕರನ್ನು ಭೇಟಿ ಮಾಡಿ, ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ರೆಬೆಲ್​ ಶಾಸಕ ಸೋಮಶೇಖರ್ ಬುಧವಾರ ರಾತ್ರಿ ಮುಂಬೈನಿಂದ ಆಗಮಿಸಿದ್ದರು. ಸೋಮಶೇಖರ್​ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಅವರ ಮನೆಯಲ್ಲಿ ಡಿಕೆಶಿ ಕಾದು ಕುಳಿತಿದ್ದರು. ಆದರೆ, ಸೋಮಶೇಖರ್​ ಮನೆಗೆ ಆಗಮಿಸಲ ಇಲ್ಲ. ಬದಲಿಗೆ ಹೋಟೆಲ್​​ ಒಂದರಲ್ಲಿ ರೂಮ್​ ಮಾಡಿ ಉಳಿದಿದ್ದರು. ಈಗ ಮತ್ತೋರ್ವ ಅತೃಪ್ತ ಶಾಸಕನ ಮನೆಗೆ ಡಿಕೆಶಿ ತೆರಳಿದ್ದಾರೆ.

ಎಂಟಿಬಿ ನಾಗರಾಜ್ ಕೂಡ ರೆಬೆಲ್​ ಆಗಿದ್ದಾರೆ. ಹಾಗಾಗಿ ಅವರ ಮನೆಗೆ ನಿನ್ನೆ ತೆರಳಿ ಟ್ರಬಲ್​ ಶೂಟರ್​ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ನಾಗರಾಜ್​ ಮನವೊಲಿಕೆಗೆ ಡಿಕೆಶಿ ಪ್ರಯತ್ನ ಮಾಡಿದ್ದಾರೆ. ವಿಶ್ವಾಸ ಮತ ಯಾಚನೆ ವೇಳೆ ಮೈತ್ರಿ ಸರ್ಕಾರವನ್ನು ಬೆಂಬಲಿಸುವಂತೆ ಕೋರಿದ್ದಾರೆ. ಇದಕ್ಕೆ ನಾಗರಾಜ್​ ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಕೊಟ್ಟ ಅತೃಪ್ತ ಶಾಸಕರ ಮನವೊಲಿಸಲು ಡಿಕೆಶಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಅಚ್ಚರಿ ಎಂದರೆ ಒಂಟಿಯಾಗಿ ಡಿಕೆಶಿ ಎಲ್ಲರ ಮನೆಗೂ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಸರ್ಕಾರ ಉಳಿಸಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ.

ಅತೃಪ್ತರ ರಾಜೀನಾಮೆ ಪರ್ವ ಆರಂಭವಾದಾಗಿನಿಂದಲೂ ಡಿಕೆಶಿ ಆ್ಯಕ್ಟಿವ್​ ಆಗಿದ್ದಾರೆ. ಮುಂಬೈನಲ್ಲಿ ರೆಬೆಲ್​ಗಳು ಉಳಿದುಕೊಂಡಿದ್ದ ಹೋಟೆಲ್​ಗೆ ಮುಂಜಾನೆಯೇ ಭೇಟಿ ನೀಡುವ ವಿಫಲ ಪ್ರಯತ್ನ ಮಾಡಿದ್ದರು. ಈ ವೇಳೆ ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಹೀಗಿದ್ದರೂ ಡಿಕೆಶಿ ಛಲ ಬಿಟ್ಟಿಲ್ಲ.

Leave a Reply

Your email address will not be published. Required fields are marked *