ಕರ್ನಾಟಕದ ನಂತರ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ ತಂತ್ರ? ಮುಂದೆ ಓದಿ..

ನ್ಯೂಸ್ ಕನ್ನಡ ವರದಿ : ಕರ್ನಾಟಕದಲ್ಲಿ ಶುರುವಾದ ಅತೃಪ್ತ ರಾಜಕೀಯ ನಾಯಕರ ಬಂಡಾಯ ಹಾಗೂ ರಾಜೀನಾಮೆ, ಗೋವಾ ರಾಜ್ಯಕ್ಕೂ ಕೂಡ ಪಸರಿಸಿದೆ. ಈ ಬೆಳವಣಿಗೆಗಳು ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿವೆ. ಇದರಿಂದಾಗಿ ಎಚ್ಚೆತ್ತುಕೊಂಡು ಮಧ್ಯಪ್ರದೇಶದಲ್ಲಿ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್‌ ಪ್ರಯತ್ನ ಆರಂಭಿಸಿದೆ. ತುಳಸಿ ಸಿಲಾವತ್‌ ಅವರ ನಿವಾಸದಲ್ಲಿ ಗುರುವಾರ ರಾತ್ರಿ ‘ಒಗ್ಗಟ್ಟು ಪ್ರದರ್ಶನ’ಕ್ಕಾಗಿ ಪಕ್ಷದ ಶಾಸಕರಿಗೆ ಔತಣಕೂಟ ಆಯೋಜಿಸಲಾಗಿತ್ತು.

ಮಧ್ಯಪ್ರದೇಶ ವಿಧಾನಸಭೆ ಸದಸ್ಯ ಬಲ 231. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 114 ಸ್ಥಾನ ಗಳಿಸಿದ ಕಾಂಗ್ರೆಸ್‌, ಬಿಎಸ್ಪಿಯ ಇಬ್ಬರು, ಎಸ್ಪಿಯ ಒಬ್ಬರು ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರಕಾರ ರಚಿಸಿದೆ. ಇನ್ನು ಕರ್ನಾಟಕ ಹಾಗೂ ಗೋವಾಗಳಲ್ಲಿ ಪಕ್ಷದ ಬಹುತೇಕ ಶಾಸಕರು ಬಿಜೆಪಿಯತ್ತ ವಾಲಿದ ಬಳಿಕ ಮಧ್ಯಪ್ರದೇಶ ಯಾವುದೇ ಬಗೆಯ ಗೊಂದಲಕ್ಕೊಳಗಾಗಲು ತಯಾರಿಲ್ಲ. ಮುಖ್ಯಮಂತ್ರಿ ಕಮಲ್‌ನಾಥ್‌, ಪಕ್ಷದ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಪಕ್ಷದ ಎಲ್ಲ ಸಚಿವರು, ಶಾಸಕರು ಭಾಗವಹಿಸಿದ್ದರು. ಸರಕಾರಕ್ಕೆ ಬೆಂಬಲ ನೀಡಿರುವ ಎಸ್ಪಿ, ಬಿಎಸ್ಪಿ ಯ ಶಾಸಕರಲ್ಲದೇ ಪಕ್ಷೇತರ ಶಾಸಕರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *