ವಿಶ್ವಕಪ್‌ ಟೂರ್ನಿ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ! ಏಕೆ ಗೊತ್ತೆ?

ನ್ಯೂಸ್ ಕನ್ನಡ ವರದಿ: ಮ್ಯಾಂಚೆಸ್ಟರ್‌, ಜುಲೈ 12: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು (ಐಸಿಸಿ) ತನ್ನ ಭವಿಷ್ಯದ ಟೂರ್ನಿಗಳಲ್ಲಿ ನಾಕ್‌ಔಟ್‌ ಹಂತಗಳಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಮಾದರಿಯ ಪ್ಲೇಆಫ್ಸ್‌ ಪರಿಚಯಿಸಬೇಕು ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಸಲಹೆ ನೀಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪ್ರಸಕ್ತ ವಿಶ್ವಕಪ್‌ನ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 240 ರನ್‌ ಗುರಿ ಬೆನ್ನತ್ತುವ ವೇಳೆ ಕೇವಲ 45 ನಿಮಿಷಗಳ ಕಾಲ ಕಳಪೆ ಆಟವಾಡಿದ ಪರಿಣಾಮ ಪ್ರಶಸ್ತಿ ರೇಸ್‌ನಿಂದ ಹೊರ ಬೀಳುವಂತಾಯಿತು ಎಂಬುದನ್ನು ಕೊಹ್ಲಿ ಖುದ್ದಾಗಿ ಒಪ್ಪಿಕೊಂಡಿದ್ದರು.

ಆಸೀಸ್‌ ವಿರುದ್ಧ ಸೆಮಿಫೈನಲ್‌ ಗೆದ್ದು ತೊಡೆತಟ್ಟಿ ಮಾರ್ಗನ್‌ ಹೇಳಿದ್ದಿದು!

“ಭವಿಷ್ಯದಲ್ಲಿ ಏನಾಗುತ್ತದೊ ಯಾರಿಗೆ ಗೊತ್ತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಗಳಿಗೆ ಕಿಂಚಿತ್ತಾದರೂ ಪ್ರಯೋಜನವಾಗಬೇಕು ಎಂದಿದ್ದರೆ, ಪ್ಲೇಆಫ್ಸ್‌ ಮಾದರಿ ತರುವ ಸಾಧ್ಯತೆ ಇದೆ. ಟೂರ್ನಿಗೆ ಇದು ಮತ್ತಷ್ಟು ಮಹತ್ವ ತಂದುಕೊಡಲಿದೆ. ಇದು ಅತ್ಯಂತ ಮುಖ್ಯ ಅಂಶ ಕೂಡ. ಆದರೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ,” ಎಂದು ವಿಶ್ವಕಪ್‌ ಟೂರ್ನಿಗೆ ಐಪಿಎಲ್‌ ಮಾದರಿಯ ಪ್ಲೇ ಆಫ್ಸ್‌ ಪರಿಚಯದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದಾರೆ.

ವಿಶ್ವಕಪ್‌ ಸೆಮಿಫೈನಲ್‌: ಮ್ಯಾಂಚೆಸ್ಟರ್‌ನಲ್ಲಿ ಹೊಳೆದ ಜಡೇಜಾ ಖಡ್ಗ!

“ಆದರೂ ಈರೀತಿಯ ನಾಕ್‌ಔಟ್‌ ಪಂದ್ಯಗಳಲ್ಲಿ ಆಡುವುದರ ಸವಾಲೇ ವಿಭಿನ್ನವಾಗಿರುತ್ತದೆ. ಹಿಂದೆ ಏನು ಮಾಡಿದ್ದೀರಿ ಎಂಬುದು ಇಲ್ಲಿ ಪರಿಗಣನೆಗೆ ಬರುವುದಿಲ್ಲ. ಆ ದಿನದಂದು ಯಾವ ತಂಡ ಉತ್ತಮವಾಗಿ ಆಡುತ್ತದೋ ಆ ತಂಡಕ್ಕೆ ಯಶಸ್ಸು ಕೈ ಹಿಡಿಯುತ್ತದೆ. ಇಲ್ಲವಾದಲ್ಲಿ ಗಂಟುಮೂಟೆ ಕಟ್ಟಿ ಮನಗೆ ಹೋಗುವಂತಾಗುತ್ತದೆ. ಇದನ್ನು ಒಪ್ಪಿಕೊಳ್ಳಲೇ ಬೇಕು,” ಎಂದು ಪ್ರಸಕ್ತ ನಾಕ್‌ಔಟ್‌ ಮಾದರಿ ಕುರಿತಾಗಿ ಕೊಹ್ಲಿ ಮಾತನಾಡಿದ್ದಾರೆ.

 

ಇಂಡೊ-ಪಾಕ್‌ ವಿಶ್ವಕಪ್‌ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!.

“ಇನ್ನು ನ್ಯೂಜಿಲೆಂಡ್‌ ತಂಡದ ಪ್ರದರ್ಶನ ನನಗೆ ಅಚ್ಚರಿಯೇನು ತರಲಿಲ್ಲ. ಕಡಿಮೆ ಮೊತ್ತ ದಾಖಲಿಸಿದದ್ದಾಗ 7 ಫೀಲ್ಡರ್‌ಗಳನ್ನು ವೃತ್ತದ ಒಳಗೇ ಫೀಲ್ಡಿಂಗ್‌ ಮಾಡುವಂತೆ ಮಾಡಿ ಎದುರಾಳಿ ಮೇಲೆ ಒತ್ತಡ ಹೇರಬಲ್ಲ ಕೆಲವೇ ತಂಡಗಳಲ್ಲಿ ನ್ಯೂಜಿಲೆಂಡ್‌ ಕೂಡ ಒಂದು. ಆರಂಭದಲ್ಲೇ ಸಂಪೂರ್ಣ ದಾಳಿ ನಡೆಸುತ್ತಾರೆ ಎಂಬುದನ್ನು ತಿಳಿದಿದ್ದೆ. ಈ ಹಂದೆಯೂ ಹಲವು ಭಾರಿ ಅವರು ಇದೇ ರೀತಿ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 5 ಫೀಲ್ಡರ್‌ಗಳನ್ನು ಕ್ಯಾಚಿಂಗ್‌ ಸ್ಥಾನದಲ್ಲಿ ನಿಲ್ಲಿಸುವುದು ಬಹಳ ಅಪರೂಪ. ಈ ತಂತ್ರವನ್ನು ನ್ಯೂಜಿಲೆಂಡ್‌ ಉತ್ತಮವಾಗಿ ಬಳಸಿಕೊಂಡಿತು,” ಎಂದು ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ರಣತಂತ್ರ ಕುರಿತಾಗಿ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ

Leave a Reply

Your email address will not be published. Required fields are marked *