ಐಪಿಎಲ್ ಇತಿಹಾಸದಲ್ಲೇ ಅತೀವೇಗದ ಅರ್ಧಶತಕ ಗಳಿಸಿದ ಕನ್ನಡಿಗ ಕೆ.ಎಲ್ ರಾಹುಲ್!
ನ್ಯೂಸ್ ಕನ್ನಡ ವರದಿ-(08.04.18): ನಿನ್ನೆಯಿಂದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬವು ಪ್ರಾರಂಭವಾಗಿದೆ. ನಿನ್ನೆ ನಡೆದ ರೋಚಕ ರೋಮಾಂಚನಕಾರಿ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯಗಳಿಸಿತ್ತು. ಇದೀಗ ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಕ್ರಿಕೆಟ್ ಪಂದ್ಯಾಟದಲ್ಲಿ ಹೊಸದೊಂದು ದಾಖಲೆಯು ಸೃಷ್ಟಿಯಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಕೇವಲ 14 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ್ದು, ಇದು ಇಂಡಿಯನ್ ಪ್ರೀಮಿಯರ್ ಲೀಗ್ ನ ಇತಿಹಾಸದಲ್ಲೇ ಅತೀವೇಗದ ಅರ್ಧಶತಕ ಆಗಿದೆ.
ಸದ್ಯ ಭಾರತ ತಂಡದಲ್ಲಿ ಕೆ.ಎಲ್ ರಾಹುಲ್ ಅವಕಾಶ ಕಳೆದುಕೊಂಡಿದ್ದು, ಆಯ್ಕೆದಾರರಿಗೆ ಐಪಿಎಲ್ ನಲ್ಲಿ ಬ್ಯಾಟಿಂಗ್ ಮೂಲಕ ಉತ್ತರ ನಿಡಿದ್ದಾರೆ. ದೆಹಲಿ ತಂಡದ ಬೌಲರ್ ಗಳನ್ನು ಚಿಂದಿ ಉಡಾಯಿಸಿದ ರಾಹುಲ್ 6 ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸಿದರು. ಬಳಿಕ 16 ನೇ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಬಾರಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಮಜಾಬ್ ತಂಡವನ್ನು ರಾಹುಲ್ ಪ್ರತಿನಿಧಿಸುತ್ತಿದ್ದಾರೆ.